ವಾಷಿಂಗ್ಟನ್: ಬಹುತೇಕ  ‘ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುವುದು ಖಚಿತ ಎಂದು  ಅಮೆರಿಕದ ಪ್ರಮುಖ ಸುದ್ದಿ ವಾಹಿನಿ ಗಳು ಶನಿವಾರ ವರದಿ ಮಾಡಿವೆ. ಇವರ ಗೆಲುವಿನ ಅಧಿಕೃತ ಘೋಷಣೆಯಷ್ಟೇ ಇನ್ನು ಬಾಕಿ ಉಳಿದಿದೆ.

ಪೆನ್ಸಿಲ್ವೇನಿಯಾದಲ್ಲಿ ಬೈಡನ್‌ ಅವರ ಗೆಲುವು ಖಚಿತ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರಿಂದಾಗಿ ಡೆಮಾಕ್ರೆಟ್‌ ಪಕ್ಷದ ಪ್ರತಿನಿಧಿಗಳ ಸಂಖ್ಯೆ 273ಕ್ಕೆ ಏರಿಕೆಯಾದಂತಾಗುತ್ತದೆ. ನೆವಾಡ ಮತ್ತು ಜಾರ್ಜಿಯಾದಲ್ಲೂ ಅವರಿಗೆ ಖಚಿತ ಮುನ್ನಡೆ ಇರುವುದರಿಂದ, ಒಟ್ಟು ಪ್ರತಿನಿಧಿಗಳ ಸಂಖ್ಯೆ 290ಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು 270 ಪ್ರತಿನಿಧಿಗಳನ್ನು ಹೊಂದುವುದು ಅಗತ್ಯ. ಎಡಿಸನ್ ರಿಸರ್ಚ್ ಸಂಸ್ಥೆ, ಸಿಎನ್‌ಎನ್‌, ಎನ್‌ಬಿಸಿ ಮೊದಲಾದ ಸುದ್ದಿಸಂಸ್ಥೆಗಳು ಬೈಡನ್‌ ಗೆಲುವಿನ ಸುದ್ದಿಯನ್ನು ಪ್ರಸಾರ ಮಾಡಿವೆ. !