ಬೆಂಗಳೂರು: ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ವಿದೇಶದಲ್ಲಿ 1 ಲಕ್ಷ ಕೋಟಿ ರೂಪಾಯಿಗಳ ನೋಟುಗಳ ಮುದ್ರಣ ಮಾಡಿ, ಶ್ರೀಮಂತರು ತಮ್ಮ ಬಳಿಯಿದ್ದ ಅಕ್ರಮ ಹಣವನ್ನು ಕಾನೂನು ಬದ್ದವಾಗಿ ಸಕ್ರಮ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇಂದ್ರ ಸರಕಾರದ ಅಧಿಕಾರಿಗಳನ್ನು ಬಳಸಿಕೊಂಡು ನಡೆಸಿದ್ದಾರೆ ಎನ್ನಲಾದ ಈ ಹಗರಣದ ಬಗ್ಗೆ ಅವರು ದಾಖಲಾತಿಗಳನ್ನು ಬಿಡುಗಡೆಗೊಳಿಸಿದರು. ಈ ಬಗ್ಗೆ ಮೋದಿ ಚಕಾರವೆತ್ತಿಲ್ಲ ಎಂದರು.