ಚಿತ್ರದುರ್ಗ: ಇಂತಹ ಪ್ರಶ್ನೆ ಜನರಲ್ಲಿ ಮೂಡಿದೆ. ಯಾಕಂದ್ರೆ ಭಾರತೀಯ ಜನತಾಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ದುರ್ಗದ ಮಠಗಳಿಗೆ ಭೇಟಿ ನೀಡಿದ್ರು. ಆನಂತರ ಮದಕರಿನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು, ಡಿ.ಸಿ ಸರ್ಕಲ್ ಬಳಿ ಇರುವ ಒನಕೆ ಓಬವ್ವಳ ಪ್ರತಿಮೆಗೆ ಹಾರ ಹಾಕಿದ್ರು. ಆದ್ರೆ ಕೂಗು ಅಳತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಏಕೆ ಹಾರ ಹಾಕಲಿಲ್ಲ ಎಂಬ ಪ್ರಶ್ನೆ ಜನರಲ್ಲಿ ಕಾಡಿದೆ.

ಯಾವಾಗ ಅಮಿತ್ ಶಾ ಅವರು ಭಾರತದ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಪ್ರತಿಮೆಗೆ  ಹಾರ ಹಾಕಲಿಲ್ಲವೂ ಆಗ ಬಿಜೆಪಿಯವ ದಲಿತ ವಿರೋಧಿ ನೀತಿಯ ನಿಜ ಬಣ್ಣ  ಬಯಲಾಗಿದೆ  ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕಾಂತರಾಜ್‌ರವರು ಹೇಳಿದ್ದಾರೆ.

ಮತ್ತು ದುರ್ಗದಲ್ಲಿ  ಸ್ವತಂತ್ರ್ಯ ಹೋರಾಟಗಾರ ಸಂಗೋಳ್ಳಿರಾಯಣ್ಣನ ಪ್ರತಿಭೆಗೆ ಹಾಗೂ ಭಕ್ತ ಕನಕದಾಸರ ಪ್ರತಿಭೆಗೆ ಮಾಲಾರ್ಪಣೆ ಮಾಡದೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿ ತಾವೇ  ಅಂಬೇಡ್ಕರ್ ಪ್ರತಿಮೆಗೆ ಹಾರವನ್ನು ಹಾಕಿ ಅಮಿತ್ ಶಾ ಚಾಣಕ್ಯ ನೀತಿಯನ್ನು ಖಂಡಿಸಿದ್ದಾರೆ..