ಬೆಂಗಳೂರು: ಐದು ವರ್ಷಕ್ಕೊಮ್ಮೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಖರ್ಚು ಮಾಡುವುದು ನಿಮ್ಮ ಊಹೆಗೂ ನಿಲುಕುವುದಲ್ಲಾ.

ಚುನಾವಣೆ ಆಯೋಗ ಒಬ್ಬ ಅಭ್ಯರ್ಥಿ ಚುನಾವಣೆಯಲ್ಲಿ ಖರ್ಚು ಮಾಡುವುದಕ್ಕೆ 28 ಲಕ್ಷ ರೂಗಳನ್ನು ನಿಗಿಧಿಮಾಡಿದೆ ಅಲ್ವ. ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿ ಮೂರು ಪಕ್ಷದ ಅಭ್ಯರ್ಥಿಗಳು ಅಂದ್ರೆ ಒಟ್ಟು 772 ಅಭ್ಯರ್ಥಿಗಳು.  ಪಕ್ಷದ ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿಗಳು ಸೇರಿದ್ರೆ ಕನಿಷ್ಟ 800 ಅಭ್ಯರ್ಥಿಗಳು ಆಗುತ್ತಾರೆ ಎಂಬುದು ಲೆಕ್ಕ.  ಆಯೋಗ ನಿಗಿಧಿ ಮಾಡಿರುವ ಹಣವನ್ನು ಲೆಕ್ಕಾಹಾಕಿದ್ರೆ ಅಂದಾಜು 2000 ಕೋಟಿ ಹಣ. ಇದು ಅಭ್ಯರ್ಥಿಗಳು ಖರ್ಚು ಮಾಡುವುದು ಇದು ರಾಮನ ಲೆಕ್ಕಾಚಾರ. ಆದ್ರೆ ಕೃಷ್ಣನ ಲೆಕ್ಕದ ಬಗ್ಗೆ ನೀವೇ ಸೇರಿಸಿಕೊಳ್ಳಿ.!

ಒಮ್ಮೆ ಚುನಾವಣೆ ನಡೆದರೆ ಇಷ್ಟೊಂದು ಹಣ ಖರ್ಚು ಕೇವಲ 15 ರಿಂದ 20 ದಿನಗಳಲ್ಲಿ ಖರ್ಚು ಆಗುತ್ತದೆ. ರಾಜ್ಯದಲ್ಲಿ 2000 ಕೋಟಿ ಹೇಗೆ ಖರ್ಚು ಆಗುತ್ತದೆ ಎಂಬುದು ಒಂದು ಸಣ್ಣ ಲೆಕ್ಕ ಅಷ್ಟೆ.