ಚಿತ್ರದುರ್ಗ: ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಮಾಡುವವರು ನಾಮ ಪತ್ರ ಸಲ್ಲಿಸುವಾಗ ಕಡ್ಡಾಯವಾಗಿ ಹೊಸ ಬ್ಯಾಂಕ್ ಅಕೌಂಟ್ ಮಾಡಿಸಬೇಕಾಗುತ್ತದೆ ಹಾಗೂ ಅಕೌಂಟ್ ನಂಬರನ್ನು ನಮೋದಿಸಬೇಕಾಗುತ್ತೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ಹೇಳಿದರು.

ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳು, ಕೇಬಲ್  ಮತ್ತು ಮುದ್ರಕರಿಗೆ ಚುನಾವಣೆಯ ಮಾರ್ಗಸೂಚಿ ಸಭೆಯಲ್ಲಿ ಮಾತನಾಡುತ್ತಿದ್ದರು. ಅಭ್ಯರ್ಥಿ ಚುನಾವಣೆಯಲ್ಲಿ 28 ಲಕ್ಷರೂಗಳನ್ನು ಮಾತ್ರ ಖರ್ಚುಮಾಡಬೇಕು ಅದಕ್ಕೆ ಸಂಬಂಧಿಸಿದಂತೆ ಎಲ್ಲವನ್ನು ಹೊಸ ಬ್ಯಾಂಕ್  ಅಕೌಂಟ್ ಮೂಲಕ ಹಣ ಪಾವತಿಸಬೇಕು ಎಂದು ಹೇಳಿದರು.

ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರು ಬಂದರೆ ಅಯಾ ಪಕ್ಷದ ಅಭ್ಯರ್ಥಿಯ ಲೆಕ್ಕಕ್ಕೆ ಖರ್ಚನ್ನು ಸೇರಿಸಲಾಗುತ್ತದೆ. ಅಥವ ಸ್ಟಾರ್ ಪ್ರಚಾರಕರು ಬಂದಾಗ ಪಕ್ಷದ ಅಭ್ಯರ್ಥಿ ವೇದಿಕೆ ಮೇಲೆ ಇಲ್ಲದಿದರೆ, ಅಭ್ಯರ್ಥಿಯ ಯಾವುದೇ ಪೋಸ್ಟರ್ ಇಲ್ಲದಿದ್ದರೆ ಆಗ ಆ ಪಕ್ಷದ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದರು.

ಹಿರಿಯೂರುನಲ್ಲಿ ಅತೀಹೆಚ್ಚು ಹಣ ಖರ್ಚುಮಾಡಲಾಗುವುದು ಎಂಬ ಉದ್ದೇಶದಿಂದ ಹೆಚ್ಚಿನ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಜೊತೆಗೆ ಅಧಿಕಾರಿಗಳ ವಾಹನಗಳನ್ನು ತಪಾಸಣೆ ಮಾಡಲಾಗುವುದು ಎಂದು ಹೇಳಿದ್ದಾರೆ.