ಬೀದರ್ : ಓಟಿಗಾಗಿ ಮಕ್ಕಳ ಕುಂಡಿ ತೊಳೆದಿದ್ದು, ಸಿಂಬಳ ತೆಗೆದಿದ್ದು, ಕೇಳಿದ್ದೀರ ತಾನೆ. ಬೆಂಗಳೂರಿನ ನೈಸ್ ರೋಡಿನಲ್ಲಿ ರೈತರ ಎಷ್ಟು ಭೂಮಿ ಕಬಳಿಸಿದ್ದಾರೆ ಎಂಬುದರ ಬಗ್ಗೆ ದೇವೇಗೌಡರಿಂದಾದಿಯಾಗಿ ಎಲ್ಲ ಪಕ್ಷದವರು ಕೂಗು ಹಾಕಿದ್ರ ಬಗ್ಗೆ ನೆನಪಿದ ತಾನೆ. ಅದೇ ಖೇಣಿಯವರು ಮತಯಾಚನೆಗಾಗಿ ಸಲೀನ್ ಶಾಪ್ ನಲ್ಲಿ ಕ್ಷೌರಮಾಡಿರವುದು ಏತಕ್ಕೆ ಅಂತ ತಿಳಿಕೊಂಡ್ರಿ. ಹಾಗಾದೆ ಈ ಸುದ್ದಿ ಓದಿ.!

ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಅವರು ದಕ್ಷಿಣ ಕ್ಷೇತ್ರದ ಅಣದೂರು ಗ್ರಾಮದಲ್ಲಿ ಗುರುವಾರ ಮತಯಾಚನೆ ಮಾಡುವ ವೇಳೆ ಸೆಲೂನ್ ಅಂಗಡಿಯಲ್ಲಿ ಕ್ಷೌರ ಮಾಡಿರುವುದು ಲೇಟೆಸ್ಟ್ ಸುದ್ದಿ.

ಬಾಚಣಿಕೆ ಕತ್ತರಿ ಹಿಡಿಯುವ ಮೂಲಕ ಸವಿತ ಸಮಾಜದ ಮತಗಳ ಭೇಟೆಗೆ ಅಶೋಕ್ ಖೇಣಿ ಇಳಿದಿದ್ದಾರೆ. ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮದುವೆ, ಮುಂಜಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನರನ್ನು ಮತ್ತೊಮ್ಮೆ ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಜನರು ಅಂಬೋಣ.!

ಕಳೆದ ಬಾರಿ ಚುನಾವಣೆಯಲ್ಲಿ ಬೀದರ್ ದಕ್ಷಿಣವನ್ನು ಮಿನಿ ಸಿಂಗಾಪುರ್ ಮಾಡುವುದಾಗಿ ಹೇಳಿದ್ದ ಅಶೋಕ್ ಖೇಣಿ ನಂತರ ಸುಳಿವೇ ಇರಲಿಲ್ಲ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿರುವುದೇನು ಕುಚೇದ್ಯವೇನಲ್ಲ.!