ಬೆಂಗಳೂರು: ಇವತ್ತೆ ಮುಗಿಯುತ್ತೇ ವಿಧಾನಸಭಾ ಕಲಾಪ ಅಂತ ಅಂದುಕೊಂಡಿದ್ರೆ ಮತ್ತೆ ನಾಳೆಗೆ ಮುಂದುವರೆದಿದೆ. ಬಜೆಟ್ ಮೇಲಿನ ಚರ್ಚೆಯನ್ನು ಒಂದು ದಿವಸದ ಮಟ್ಟಿಗೆ ಮುಂದುವರೆಸುವ ಬಗ್ಗೆ ಸಭಾಧ್ಯಕ್ಷರ ಕೊಠಡಿಯಲ್ಲಿ ನಡೆದ ಕಾರ್ಯಕಲಾಪ ಸಮಿತಿ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.

ಸಭೆಯಲ್ಲಿ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಒಂದು ದಿನ ಕಲಾಪ ವಿಸ್ತರಣೆಗೆ ಮನವಿ ಮಾಡಿದ ಹಿನ್ನೆಲೆ ಬಜೆಟ್ ಅಧಿವೇಶನವನ್ನು ನಾಳೆ ತನಕ ಮುಂದುವರೆಸುವುದಕ್ಕೆ ಸಭಾಧ್ಯಕ್ಷರು ನಿರ್ಧಾರ ಮಾಡಿದ್ದಾರೆ.