ನವದೆಹಲಿ: ಅನ್‌ಲಾಕ್-3 ಮಾರ್ಗಸೂಚಿಯನ್ನು ಗೃಹ ಸಚಿವಾಲಯ ಇಂದು ಬಿಡುಗಡೆ ಮಾಡಿದೆ. ರಾತ್ರಿ ವೇಳೆ ಜನರ ಸಂಚಾರಕ್ಕೆ ಇದ್ದ ನಿರ್ಬಂಧ ತೆರವುಗೊಳಿಸಲಾಗಿದೆ.

ಆಗಸ್ಟ್‌ 5ರಿಂದ ಯೋಗ ಕೇಂದ್ರಗಳು ಮತ್ತು ಜಿಮ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಶಾಲೆ, ಕಾಲೇಜುಗಳು ಹಾಗೂ ತರಬೇತಿ ಸಂಸ್ಥೆಗಳು ಆಗಸ್ಟ್‌ 31ರವರೆಗೂ ಮುಚ್ಚಿರಲಿವೆ.

ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸೇರಿದಂತೆ ಜನರು ಸೇರುವ ಸಭೆ–ಸಮಾರಂಭಗಳಿಗೆ ಅವಕಾಶ ನೀಡಲಾಗಿಲ್ಲ.