ಮೈಸೂರು:  ಬಡವರ ಹಸಿದ ಹೊಟ್ಟೆ ತುಂಬಿಸಬೇಕಾಗಿದ್ದ ಅನ್ನ ಭಾಗ್ಯದ ಅಕ್ಕಿ ಕಳುವಾಗಿದೆಯಂತೆ. ಒಂದು ಕ್ವಿಂಟಲ್ ಅಥವಾ ಎರಡು ಕ್ವಿಂಟಲ್ ಅಲ್ಲ ಬರೋ ಬರಿ ಒಂದು ಸಾವಿರ ಕ್ವಿಂಟಲ್.!

ನಂಜನಗೂಡಿನ ಎಪಿಎಂಸಿಯ ಗೋದಾಮಿನಲ್ಲಿದ್ದ ಅನ್ನ ಭಾಗ್ಯದ ಅಕ್ಕಿ ಕಳುವಾಗಿದೆ.  50 ಕೆಜಿ ಬ್ಯಾಗಿನ 2000 ಮೂಟೆ ಅಂದ್ರೆ ಒಂದು ಸಾವಿರ ಕ್ವಿಂಟಲ್ ಅಕ್ಕಿ ನಾಪತ್ತೆ ಆಗಿದೆ. ಬೆಂಗಳೂರಿನಿಂದ ನಂಜನಗೂಡು ಎಂಪಿಎಂಸಿ ಗೋದಾಮಿಗೆ ಬಂದಿದ್ದು ರೆಕಾರ್ಡ್ ಆಗಿದೆ ಆದ್ರೆ ಅಲ್ಲಿಂದ ಎಲ್ಲಿಗೆ ಹೋಯಿತು ಎಂಬುದು ಗೊತ್ತಿಲ್ಲವಂತೆ  ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮೈಸೂರು ಆಹಾರ ಇಲಾಖೆ ಉಪನಿರ್ದೇಶಕರು ಸ್ಥಳಕ್ಕೆ ಭೇಟಿ ನೀ ಡಿ ಲೆಕ್ಕ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

(ಸಾಂದರ್ಭಿಕ ಚಿತ್ರ)