ಮೈಸೂರು: ನಾನು ಮುಖ್ಯ ಮಂತ್ರಿ  ಆಗಿದ್ದ ಸಮಯದಲ್ಲಿ ಬಡವರಿಗಾಗಿ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡಲಾಗುತ್ತಿದ್ದ 7 ಕೆ.ಜಿ ಅಕ್ಕಿಯನ್ನು ಈಗ 5 ಕೆ.ಜಿಗೆ ಇಳಿಸಿದ್ದಾರೆ, ಇವರಪ್ಪನ ಮನೆಯಿಂದ ತಂದು ಅಕ್ಕಿ ಕೊಡ್ತಿದ್ರಾ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಪ್ರಸ್ತಾಪಿಸಿದರು, ಇದೇ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಮಾತನಾಡಿ ಜನತೆ ಉದ್ಯೋಗವನ್ನು ಕೇಳಿದ್ರೆ, ಪಕೋಡ ಮಾರಿ ಅಂತ ಹೇಳುತ್ತಾರೆ.

ರೈತರ ಪ್ರತಿಭಟನೆ ಬಗ್ಗೆ ಖುದ್ದು ಸುಪ್ರಿಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದರು ಕೂಡ ಅವರು ಬುದ್ದಿ ಕಲಿತಿಲ್ಲ, ರೈತರು ಪ್ರತಿಭಟನೆಯನ್ನು ನಡೆಸಲು ಶುರು ಮಾಡಿ 48 ದಿನ ಕಳೆಯುತ್ತ ಬಂದರೂ ಕೂಡ ಪ್ರಧಾನಿ ಅವರನ್ನು ಮಾತನಾಡಿಸುವ ಗೋಜಿಗೆ ಹೋಗಿಲ್ಲ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.