ಚಿತ್ರದುರ್ಗ : ಹೊಳಲ್ಕೆರೆ ತಾಲ್ಲೂಕು ಕಡೂರು ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ನಾಲ್ಕು ವರ್ಷದ ಬಾಲಕ ಅಭಿಲಾಷ್ ಮನೆಗೆ ಡಾ. ಶಿವಮೂರ್ತಿ ಮುರುಘಾ ಶರಣರು ಭೇಟಿ ನೀಡಿ ಮೃತ ಬಾಲಕನ ತಂದೆ ತಾಯಿಗಳಿಗೆ ಸಾಂತ್ವನ ಹೇಳಿದರಲ್ಲದೆ, ೧೦ ಸಾವಿರ ರೂ.ಗಳ ಪರಿಹಾರವನ್ನು ವಿತರಿಸಿದರು.

ನಂತರ ಮಾತನಾಡಿದ ಶ್ರೀಗಳು, ಈ ಸಾವು ಅನುಮಾನಾಸ್ಪದವಾಗಿದ್ದು, ಯುಗಾದಿ ಅಮಾವಾಸ್ಯೆ ದಿನ ಕಾಣೆಯಾಗಿದ್ದರಿಂದ ವಾಮಾಚಾರಕ್ಕೆ ಬಲಿಯಾಗಿರಬಹುದೇ ಅಥವಾ ವಂಶ ಬೆಳೆಯಬಾರದೆಂಬ ಕಾರಣಕ್ಕೆ ದ್ವೇಷದಿಂದ ಈ ಮಗುವಿನ ಕೊಲೆ ಮಾಡಿರಬಹುದೇ ಅಥವಾ ಕುಟುಂಬದ ಮೂಲಗಳು ಹೇಳುವ ಪ್ರಕಾರ ಈ ಊರಿನವರೇ ಗೊತ್ತಿರುವವರು ಈ ಕೊಲೆ ಮಾಡಿರಬಹುದೇ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದರು. ನಂತರ ಶ್ರೀಗಳು ಮಗುವಿನ ಮೃತದೇಹ ದೊರೆತ ಸ್ಥಳಕ್ಕೂ ಭೇಟಿ ನೀಡಿದರು.