ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಠದ ಮೂಲಗಳ ಪ್ರಕಾರ ಕಫಾ ಕಟ್ಟಿದ ಹಿನ್ನೆಲೆ ಮುರುಘಾಶ್ರೀ ಗಳಿ ಸ್ವಲ್ಪ ಉಸಿರಾಟ ತೊಂದರೆ ಆಗಿದ್ದು ಅವರನ್ನು ತಕ್ಷಣ ಬಿಜಿಎಸ್ ಆಸ್ಪತ್ರೆಗೆ ದಾಖಲುಮಾಡಲಾಗಿದೆ.

ಈಗ  ಶರಣರು ಆರೋಗ್ಯವಾಗಿದ್ದಾರೆ. ಚೇತರಿಸಿ ಕೊಳ್ಳುತ್ತಿದ್ದಾರೆ ಹಾಗಾಗಿ  ಭಕ್ತರು ಆತಂಕ ಪಡುವ ಅಗತ್ಯವಿಲ್ಲ  ಎಂದು ಮಠದ ಮೂಲಗಳು ತಿಳಿಸಿವೆ.