ಬೆಂಗಳೂರು :  ಸುಪ್ರಿಂ ಕೋರ್ಟ್ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆಯಾಗದೇ ಸೋಮವಾರಕ್ಕೆ ಅರ್ಜಿ ಮುಂದೂಡಲ್ಪಟ್ಟು ಶಾಕ್ ನೀಡಿದ ಬೆನ್ನಲ್ಲೇ, ವಿಧಾನಸಭಾ ಕಾರ್ಯದರ್ಶಿಯವರಿಂದ ಮತ್ತೊಂದು ಶಾಕ್ ಎದುರಾಗಿದೆ.

ಏನಪ್ಪ ಅಂದ್ರೆ  ಜನವರಿ 25ರ ಒಳಗೆ ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವಂತೆ ವಿಧಾನಸಭಾ ಕಾರ್ಯದರ್ಶಿಯವರು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಪತ್ರದಲ್ಲಿ ಶಾಸಕರಿಲ್ಲದೇ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ. ಹೀಗಾಗಿ ಶೀಘ್ರವೇ ಉಪ ಚುನಾವಣೆಗೆ ದಿನಾಂಕ ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಇದೇ ಅಲ್ಲವೆ ಅನರ್ಹ ಶಾಸಕರಿಗೆ ಬಿಗ್ ಶಾಕ್.!