ನವದೆಹಲಿ : ಸ್ಪೀಕರ್ ತೀರ್ಮಾನ ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂಕೋರ್ಟ್ ನಿಂದ ಇಂದು ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಇದೆ.!

ಸುಪ್ರೀಂಕೋರ್ಟ್ ನಿಂದ ಅನರ್ಹ ಶಾಸಕರ ಅರ್ಜಿ ಕುರಿತು ನಿನ್ನೆಯೇ ತೀರ್ಪು ಹೊರಬೀಳಬೇಕಿತ್ತು. ಆದರೆ, ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿದ್ದಾರೆ ಎನ್ನಲಾದ ಆಪರೇಷನ್ ಕಮಲ ಹಾಗೂ ಅನರ್ಹ ಶಾಸಕರ ಕುರಿತು ಆಡಿಯೋವನ್ನು ಸಲ್ಲಿಸಿ ಪ್ರಮುಖ ಸಾಕ್ಷ್ಯವನ್ನಾಗಿ ಪರಿಗಣಿಸುವಂತೆ ವಕೀಲ ಕಪಿಲ್ ಸಿಬಾಲ್ ಮನವಿ ಮಾಡಿದ್ದರು . ಈ ಹಿನ್ನೆಲೆಯಲ್ಲಿ ಇಂದು ಸುಪ್ರೀಂಕೋರ್ಟ್ ನಿಂದ ತೀರ್ಪು ಹೊರಬೀಳುವ ನಿರೀಕ್ಷೆ ಇದೆ.!