ಬೆಂಗಳೂರು; ಎಕೆಂದ್ರೆ ಅನರ್ಹ ಶಾಸಕರ ಕ್ಷೇತ್ರದಲ್ಲಿ ಡಿ.5ರಂದು ಉಪಚುನಾವಣೆ ನಿಗದಿಯಾಗಿದ್ದು ನಾಲ್ಕು ದಿನಗಳಲ್ಲಿ ನೀತಿ ಸಂಹಿತೆ ಜಾರಿಯಾಗುತ್ತಿರುವುದು ಅನರ್ಹರ ಎದೆಬಡಿತವನ್ನು ಹೆಚ್ಚಿಸಿದೆ.

ನ.11ರೊಳಗೆ ಸುಪ್ರೀಂ ತೀರ್ಪು ಪ್ರಕಟವಾಗದಿದ್ದರೆ ಅನರ್ಹರಿಗೆ ತ್ರಿಶಂಕು ಸ್ಥಿತಿ ಖಚಿತ. ಹೀಗಾಗಿ ಅನರ್ಹ ಶಾಸಕರು ಉಪಚುನಾವಣೆ ಮುಂದೂಡುವಂತೆ ಸುಪ್ರೀಂ ಕೋರ್ಟ್​​ನಲ್ಲಿ ಇಂದು ಆರ್ಜಿ ಹಾಕಿ, ಅದು ತುರ್ತಾಗಿ ವಿಚಾರಣೆಯಾಗಿ ಇಂದು ತೀರ್ಪು ಬರಬೇಕು ಇಲ್ಲವಾದರೆ ಅವರ ಎದೆ ಬಡಿತ ಶುರುವಾಗುವುದು ಗ್ಯಾರಂಟಿ.!