ಬೆಂಗಳೂರು: ಬೆಂಗಳೂರಿನಲ್ಲಿ ರೆಕಾರ್ಡ್ ಮತ್ತು ಲೈವ್ ಮ್ಯೂಜಿಸಿ ಬಳಸುವ ಹೋಟೆಲ್, ರೆಸ್ಟೋರೆಂಟ್‍ಗಳಿಗೆ ನೋಟಿಸ್ ನೀಡಲಾಗಿದ್ದು, ಅನಧಿಕೃತವಾದ ಲೈವ್‍ಬ್ಯಾಂಡ್ ಮತ್ತು ನೈಟ್‍ಕ್ಲಬ್‍ಗಳಿಗೆ ಕಡಿವಾಣ ಹಾಕಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ಹೇಳಿದ್ದಾರೆ.

ನಗರದಲ್ಲಿರುವ ಹೋಟೆಲ್, ರೆಸ್ಟೋರೆಂಟ್ ಕ್ಲಬ್‍ಗಳು ಸೇರಿ ಸುಮಾರು 400 ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು,.

ಸಂಗೀತ ಬಳಸುವ ಅಥವಾ ಲೈವ್‍ಬ್ಯಾಂಡ್ ನಡೆಸುವ ಸಂಸ್ಥೆಗಳು ಪೂರ್ವಾನುಮತಿ ಪತ್ರ, ಬಿಬಿಎಂಪಿಯಿಂದ ಸ್ವಾಧೀನ ಪತ್ರ ಸೇರಿದಂತೆ ಸುಮಾರು ಐದಾರು ಪ್ರಮುಖ ದಾಖಲಾತಿಗಳನ್ನು ಸಲ್ಲಿಸಬೇಕು ಎಂದು ಹೇಳಿದ್ದಾರೆ.

ಅದನ್ನು ಪರಿಶೀಲಿಸಿ ಸುಪ್ರೀಂಕೋರ್ಟ್ ಆದೇಶದನ್ವಯ ಅಧಿಕೃತ ಪರವಾನಗಿ ನೀಡಲಾಗುವುದು. ಒಂದು ವೇಳೆ ಪರವಾನಗಿ ಇಲ್ಲದೇ ಇದ್ದರೆ ಅವುಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ಹೇಳಿದ್ದಾರೆ.