ಮಂಡ್ಯ: ಮೋದಿ ಒಬ್ಬ ಸುಳ್ಳಿನ ಸರದಾರ. ಮಾತೆತ್ತಿದರೆ ಸುಳ್ಳೇ ಬರುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿ,  ಮೋದಿಯವರು ಮೊದ ಮೊದಲು ನನ್ನ ಬಗ್ಗೆ ಅನುಕಂಪ ತೋರಿಸಿದ್ದರು. ಆದರೆ ಅದು ಕೇವಲ ರಾಜಕೀಯವಾಗಿ ಮಾತ್ರ ಎಂದರು.

ಮಂಡ್ಯದ ಮಳವಳ್ಳಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನರೇಂದ್ರ ಸ್ವಾಮಿ ಪರ ಪ್ರಚಾರ ಮಾಡುವ ವೇಳೆ ಮಾತನಾಡಿದ ಅವರು ಮೋದಿ ಹಾಗೂ ಬಿಜೆಪಿಗರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.ಬಿಜೆಪಿಯಿಂದ ಆರಿಸಿ ಬಂದ ಮಂತ್ರಿಗಳು, ಶಾಸಕರು ಸಂವಿಧಾನವನ್ನೇ ಬದಲಿಸ್ತೀವಿ ಅಂತಾರೆ. ಅನಂತ್ ಕುಮಾರ್ ಹೆಗಡೆ ಬಾಯಿ ತೆರೆದ್ರೆ ಸಾಕು ಸಂವಿಧಾನದ ವಿರುದ್ದ ಹೋರಾಟ ಮಾಡುತ್ತೇನೆ ಎನ್ನುತ್ತಾರೆ. ಈ ವಿಚಾರವಾಗಿ ಸಂಸತ್ತಿನಲ್ಲಿ ಕ್ಷಮೆ ಕೇಳಿಸಿದ್ದೆವು. ಆದರೆ ನಾಯಿ ಬಾಲ ಡೊಂಕು ಎಂಬಂತೆ ಎಲ್ಲೇ ಹೋದ್ರೂ ಅದನ್ನೇ ಮಾತಾಡ್ತಾನೆ ಎಂದು ಕಿಡಿ ಕಾರಿದ್ದಾರೆ.