ಬೆಂಗಳೂರು: ಈಚೆಗೆ ನಡೆದ ಲೋಕ ಸಮರದ ಸೋಲಿನ ನೈತಿಕ ಹೊಣೆಹೊತ್ತ ದಿನೇಶ್, ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರವಾನಿಸಿದ್ದಾರಂತೆ.!

2018 ಜು.4ರಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸಚಿವ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ನಡುವೆ​ ಪೈಪೋಟಿ ಇದೆ. ಆದರೆ “ಕೈ’ ಕಮಾಂಡ್ ಒಪ್ಪುತ್ತದೋ ಎಂಬುದು ಇನ್ನು ಕಾದು ನೋಡಬೇಕಿದೆ.!