ಬೆಂಗಳೂರು: ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಐಎಎಸ್‌ ಅಧಿಕಾರಿ ಡಿ.ಕೆ ರವಿಯವರ ಪತ್ನಿ ಕುಸುಮಾ ಎಚ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು.
ಇದೇ ವೇಳೆ ಕುಸುಮಾ ಅವರಿಗೆ ಪಕ್ಷದ ಹಿರಿಯ ನಾಯಕರು ಪ್ರಾಥಮಿಕ ಸ್ಥಾನದ ಚೀಟಿಯನ್ನು ನೀಡಿ ಬರಮಾಡಿಕೊಂಡರು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವ ಕುಸುಮಾ ಅವರ ತಂದೆ ಹನುಮಂತರಾಯಪ್ಪ ಸೇರಿದಂತೆ ಪಕ್ಷದ ಹಿರಿಯ ನಾಯಕರು ಗಳು ಹಾಜರಿದ್ದರು.
ಇನ್ನೂ ಆರ್‌.ಆರ್‌ ನಗರ ವಿಧಾಸಭೆಗೆ ನಡೆಯಲಿರುವ ಉಪಚುನಾವಣೆಯಲ್ಲಿ ಕುಸುಮಾ ಅವರು ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅವರು ಕಾಂಗ್ರೆಸ್‌ಗೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನೂ ತಮ್ಮ ಮಗನ ಫೋಟೋವನ್ನು ಬಳಕೆ ಮಾಡಿಕೊಂಡ್ರೆ ಸರಿ ಬರೋದಿಲ್ಲ ಅಂತ ಕುಸುಮಾ ಅವರ ಅತ್ತೆ ದಿವಗಂತ ಡಿ.ಕೆ ರವಿಯವರ ತಾಯಿ ಗೌರಮ್ಮ ಅವರು ಎಚ್ಚರಿಕೆ ನೀಡಿದ್ದಾರೆ.