ಬೆಂಗಳೂರು : ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ನೇಮಿಸಿದೆ. ನಾವು ಅವರ ನೇತೃತ್ವದಲ್ಲಿ ಸಾಗುತ್ತೇವೆ. ಇದರಲ್ಲಿ ಯಾವ ಭಿನ್ನಾಭಿಪ್ರಾಯ ಇಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಅಧಿಕಾರಿಗಳೂ ಒಂದೇ ಭೇದಭಾವ ಇಲ್ಲ. ಕುರುಬು, ಒಕ್ಕಲಿಗ, ಲಿಂಗಾಯತ ಅಥವಾ ಬೇರೆ ಜಾತಿಗಳನ್ನು ನೋಡಿ ಯಾವುದೇ ಅಧಿಕಾರಿಯನ್ನು ಆಯಕಟ್ಟಿನ ಜಾಗಕ್ಕೆ ಹಾಗುವ ಕಾರ್ಯ ಸರ್ಕಾರದ ಮಟ್ಟದಲ್ಲಿ ಆಗುತ್ತಿಲ್ಲ. ಹೊಸ ಸರ್ಕಾರ ಬಂದಾಗ ವರ್ಗಾವಣೆ ಪ್ರಕ್ರಿಯೆ ಸಾಮಾನ್ಯ ಎಂದ ಹೇಳಿದ್ದಾರೆ.