ಬೆಂಗಳೂರು: ಸಚಿವ ಕೃಷ್ಣಭೈರೇಗೌಡ ಇಂದು ಬೆಂಗಳೂರಿನ ಅತೃಪ್ತ ಶಾಸಕರಾದ ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ & ಕೆ.ಗೋಪಾಲಯ್ಯ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನನ್ನ ತಾಯಿ & ಪತ್ನಿ ಒಪ್ಪಿರಲಿಲ್ಲ. ಆದರೆ ಈ ಅತೃಪ್ತರೇ ನನ್ನ ಸಹೋದರರೆಂದು ತಿಳಿದು, ಅವರ ಮಾತಿಗೆ ಮನ್ನಣೆ ನೀಡಿ ಚುನಾವಣೆಗೆ ಸ್ಪರ್ಧಿಸಿದೆ. ಅವರ ಕ್ಷೇತ್ರಗಳಲ್ಲಿ ಕನಿಷ್ಠ 45000 ಮತ ಕಡಿಮೆ ಆಯಿತು. ಪರಿಣಾಮ ಇಂದು ಸಾಲಗಾರನಾಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.