ಬೆಂಗಳೂರು : ಅತಿಥಿ ಶಿಕ್ಷಕರಿಗೆ ರಾಜ್ಯ ಸರ್ಕಾರ ಒಳ್ಳೆ ಸುದ್ದಿನೀಡಲು ಮುಂದಾಗಿದೆ. ಅತೀ  ಶೀಘ್ರದಲ್ಲಿಯೇ,  ಅತಿಥಿ ಶಿಕ್ಷಕರ ಗೌರವ ಧನ ಹೆಚ್ಚಳಕ್ಕೆ ಸರ್ಕಾರ ತೀರ್ಮಾನಿಸಿದೆ.!

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಹಣಕಾಸು ಇಲಾಖೆಯ ಅನುಮತಿ ಪಡೆದು ಆದಷ್ಟು ಶೀಘ್ರ ಗೌರವಧನ ಹೆಚ್ಚಳ ಮಾಡಲಾಗುವುದು ಎಂದು ಹೇಳಿದ್ದಾರೆ.

ಅತಿಥಿ ಶಿಕ್ಷಕರಿಗೆ ಮಾಸಿಕ ಕೇವಲ 8 ಸಾವಿರ ರೂ. ಮಾತ್ರ ನೀಡಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದ್ದು, ಗೌರವಧನ ಹೆಚ್ಚಳ ಮಾಡುವಂತೆ ಶಿಕ್ಷಕರ ಮನವಿಗೆ ಸ್ಪಂಧಿಸಿದ ಸಚಿವರು ಶೀಘ್ರವೇ ಗೌರವಧನ ಹೆಚ್ಚಿಳ ಮಾಡುವುದಾಗಿ ತಿಳಿಸಿದ್ದಾರೆ.!