ಬೆಂಗಳೂರು : ಫೆಬ್ರವರಿ 8 ರಿಂದ ನಗರದಲ್ಲಿ ಆಹೋರಾತ್ರಿ ಮುಷ್ಕರ ನಡೆಸಿ ಗೌರವಧನ ಪರಿಷ್ಕರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ  ಅಡುಗೆ ಸಹಾಯಕರಿಗೆ 500 ರೂ ಹೆಚ್ಚಿಸಿ ಆದೇಶನೀಡಲಾಗಿದೆ.

2018 ರ ಜನವರಿ 1 ರಿಂದಲೇ ಈ ಆದೇಶ ಅನ್ವಯವಾಗಲಿದ್ದು, ಮುಖ್ಯ ಅಡುಗೆಯವರಿಗೆ ಮಾಸಿಕ 2,700 ಹಾಗೂ ಅಡುಗೆ ಸಹಾಯಕರಿಗೆ ಮಾಸಿಕ 2,600 ರೂ. ಗೌರವ ಸಂಭಾವನೆ ಪಾವತಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಅನುಮತಿ ನೀಡಲಾಗಿದೆ.

ಬಿಸಿಯೂಟ ನೌಕರರ ಒತ್ತಡಕ್ಕೆ ಮಣಿದ ಸಿಎಂ ಸಿದ್ದರಾಮಯ್ಯ ಅವರು ಅಕ್ಷರ ದಾಸೋಹ ಸಿಬ್ಬಂದಿಗಳ ಪ್ರಸ್ತುತ ಗೌರವ ಸಂಭಾವನೆಯನ್ನು 500 ರೂ. ಹೆಚ್ಚಿಸಲು ಸಮ್ಮತಿ ಸೂಚಿಸಿದ್ದಾರೆ.

ರಾಜ್ಯಸರಕಾರ ಅಡುಗೆ ಸಹಾಯಕರಿಗೆ ಬಂಪರ್ ಯುಗಾದಿ ಹಬ್ಬಕ್ಕೆ ನೀಡಿದ ಗಿಫ್ಟ್..!