ನವದೆಹಲಿ: ಕಳೆದ ಎರಡು ತಿಂಗಳಿನಿಂದ ವಯೋ ಸಹಜ ಆನಾರೋಗ್ಯ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರುಳೆದಿದ್ದಾರೆ. ಅವರ ಅಗಲಿಕೆಗೆ ಪ್ರಧಾನ ಮಂತ್ರಿ ನರೇದ್ರ ಮೋದಿಯವರಿಂದ ಹಿಡಿದು ಎಲ್ಲ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಜಾತಶತ್ರು ನಡೆದ ಬಂದ ದಾರಿ:-

ಮಧ್ಯಪ್ರದೇಶದ ಬ್ರಾಹ್ಮಣ ಕುಟುಂಬದಲ್ಲಿ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣ ದೇವಿ ದಂಪತಿಗಳ ಮಗನಾಗಿ ಡಿಸೆಂಬರ್ 25- 1924ರಂದು ಗ್ವಾಲಿಯರ್ ನಲ್ಲಿ ಜನನ. ಬ್ರಹ್ಮಚಾರಿಯಾಗಿದ್ದ ವಾಜಪೇಯಿ ಉತ್ತಮ ವಾಗ್ಮಿ ಮತ್ತು ಕವಿಯಾಗಿದ್ದಾರೆ.ಭಾರತ ಸರ್ಕಾರವು ಇವರಿಗೆ 1992ರಲ್ಲಿ ಪಧ್ಮವಿಭೂಷಣ ಮತ್ತು ಮಾರ್ಚ 27 -2015ರಂದು ಭಾರತ ರತ್ನ ಪ್ರಶಸ್ಥಿ ನೀಡಿ ಗೌರವಿಸಿದೆ.1951ರಲ್ಲಿ ಭಾರತೀಯ ಜನಸಂಘ (ಬಿ.ಜೆ.ಎಸ್) ಸಂಸ್ಥಾಪನೆಯಾಯಿತು.ಪಕ್ಷದ ಸಂಸ್ಥಾಪಕರಾದ ಡಾ,ಶ್ಯಾಮಪ್ರಸಾದ್ ಮೂಖರ್ಜಿ ಅವರಿಗೆ ಸಹಾಯಕರಾಗಿದ್ದರು.

ಅಟಲ್ ಜಿ .ಅವರ ಪ್ರಥಮ ಹೊಣೆಯಾಗಿತ್ತು.ಅಟಲ್ ವಾಜಪೇಯಿಯವರು (1948 ರಲ್ಲಿ ಅಟಲ್ ಜಿ ಸ್ಥಾಪಿಸಿದ್ದ ವಾರ ಪತ್ರಿಕೆ)  ತಮ್ಮದೇ ‌ಸಂಪಾದಕತ್ವದ ಪಾಂಚಜನ್ಯ ಪತ್ರಿಕೆಯಲ್ಲಿ  ಬರೆಯುತ್ತಿದ್ದರು. ಅತ್ಯುನ್ನತ ಶಿಕ್ಷಣ ಪಡೆದಿರುವ ಅಟಲ್ ಜೀ ಅವರು ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ .

ಇಂದು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ.ಪಕ್ಷದ ಸಂಘಟನೆ ಬೆಳೆದಿದೆ.ಅಟಲ್ ಬಿಹಾರಿ ವಾಜಪೇಯಿಯವರ ನಿರಂತರ ಮತ್ತು ಪ್ರಾಮಾಣಿಕ ನಡೆಗೆ ಸಂದ ಫಲವಿದಾಗಿದೆ.1957ರ ಲೋಕಸಭಾ ಚುನಾವಣೆಗೆ ಉತ್ತರಪ್ರದೇಶದ ಬಲ್ ರಾಮ್ ಪುರ ಕ್ಷೇತ್ರದಿಂದ ವಿಜಯಿಯಾಗುತ್ತಾರೆ.ಅಲ್ಲಿಂದ 5 ದಶಕಗಳಿಗೂ ಹೆಚ್ಚು ಕಾಲ ಅವರು ರಾಜಕೀಯದಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸುತ್ತಾರೆ.

1996ರಲ್ಲಿ 13ದಿನಗಳ ಪ್ರಧಾನಿ ಮಂತ್ರಿಯಾಗಿ 1998ರಿಂದ1999ರವರೆಗೆ 11ತಿಂಗಳುಗಳ ಪ್ರಧಾನಿಯಾಗಿ ನಂತರ 1999ರಿಂದ2004ರವರೆಗೆ ಪೂರ್ಣಾವಧಿ ಪ್ರಧಾನಿಮಂತ್ರಿಯಾಗಿ ಅಲಂಕರಿಸುತ್ತಾರೆ.1998ರಲ್ಲಿ ಭಾರತದ ಎರಡನೇ ಪರಮಾಣು ಪರೀಕ್ಷೆಯನ್ನು ಪೋಖ್ರಾನ್ ನಲ್ಲಿ ನಡೆಸಿದ ‌ಹೆಗ್ಗಳಿಕೆ ಅವರದು. ರಾಜಕಾರಣದಲ್ಲಿ ಅಜಾತಶತ್ರು ಎಂದೇ ಬಿಂಬತರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಇನ್ನಿಲ್ಲ. ಅವರ ನೆನಪು ಮಾತ್ರ ಎಲ್ಲರನ್ನು ಕಾಡುತ್ತದೆ.