ಬೆಂಗಳೂರು:  ಕೆಲ ಪೊಲೀಸರ ವಿರುದ್ದ ಅಗ್ನಿ ಶ್ರೀಧರ್  ಡಿಜಿಪಿ ಆರ್.ಕೆ ದತ್ತಾ ಅವರಿಗೆ ದೂರು ನೀಡಿದ್ದಾರೆ.

ಕಳೆದ ತಿಂಗಳು  ನನ್ನ ಮನೆಯ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ  ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಅತಿರೇಕವಾಗಿ ವರ್ತಿಸಿದ್ದರು. ಹಾಗಾಗಿ ಅವರ ಪೊಲೀಸರ ವಿರುದ್ದ ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.

ಆ ಸಂದರ್ಭದಲ್ಲಿ  ನನಗೆ ಮಾತಾಡಲು ಪೊಲೀಸರು ಅವಕಾಶವನ್ನೇ ನೀಡಿರಲಿಲ್ಲ. ‘ಅಕ್ರಮ ಶಸ್ರಾಸ್ತ್ರ ಇಟ್ಟಿದ್ದೀಯ. ನೀನು ರೌಡಿ ಶೀಟರ್ ‘ ಎಂದು ಬೈದಿದ್ದರು.

ಕೆಲ ಪೊಲೀಸರ ವಿರುದ್ದ ಡಿಜಿಪಿಗೆ ದೂರು ನೀಡಿದ್ದೇನೆ.  ದೂರಿಗೆ ಸ್ಪಂಧಿಸಿದ ಧತ್ತಾ ಅವರು ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ.