ಬೆಂಗಳೂರು : ಬಂಗಾರವನ್ನು ಅಕ್ರಮವಾಗಿ ಸಾಗಿಸಲು ಕಳ್ಳರು ಚಾಪೆ ಕೆಳಗೆ ನುಸಿಳಿದ್ರೆ ಅದನ್ನು ಕಂಡು ಹಿಡಿಯಲು ಕಸ್ಟಮ್ ಅಧಿಕಾರಿಗಳು ರಂಗೋಲಿಕೆಳಗೆ ನುಸಿಳುತ್ತಾರೆ ಎಂಬ ಗಾದೆಗೆ ಪೂರಕ ಎಂಬಂತೆ ಬಂಗಾರವನ್ನು ಅಕ್ರಮವಾಗಿ ಸಾಗಿಸಲು ಕಳ್ಳರು ಏನೆಲ್ಲಾ ತಂತ್ರ ಬಳಸುತ್ತಾರೆ,  ಎಂಬುದಕ್ಕೆ ಇಲ್ಲೊಬ್ಬ ಕತ್ರನಾಕ್ ಕಳ್ಳ ಏನು ಮಾಡಿದ್ದಾನೆ.!

ಚಾಕ್ಲೇಟ್ಹಾಗೂಮೇಕಪ್ಸೆಟ್ನಲ್ಲಿಅಕ್ರಮವಾಗಿಚಿನ್ನಸಾಗಿಸುತ್ತಿದ್ದಖತರ್ನಾಕ್ಕಳ್ಳನನ್ನುಕಸ್ಟಮ್ಅಧಿಕಾರಿಗಳುಬಂಧಿಸಿದ್ದಾರೆ. ಕಾಸರಗೋಡು ನಿವಾಸಿ ರೌಫಟ್ಕಕ್ಕಲ್ ಬಂಧಿತ ಆರೋಪಿ. ಈತ ಬೆಂಗಳೂರಿನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತದ್ದ ವ್ಯಕ್ತಿಯ ಬ್ಯಾಗ್ ಅನ್ನು ಶೋಧಮಾಡಿದ್ದಾರೆ.

ಅಧಿಕಾರಿಗಳು ಆತನ ಬ್ಯಾಗ್ ಪರಿಶೀಲಿಸಿದಾಗ ಚಾಕಲೇಟ್ ನಲ್ಲಿ ಮತ್ತು ಮೇಕಪ್ ಸೆಟ್ನಲ್ಲಿ.ಒಟ್ಟು 11.83 ಲಕ್ಷ ರೂ. ಮೌಲ್ಯದ 384 ಗ್ರಾಂ ಚಿನ್ನವನ್ನು ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಕಸ್ಟಮ್ ಅಧಿಕಾರಿಗಳು ಚಿನ್ನ ಹೇಗೆ ಬಂತು ಎನ್ನುವುದರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.