ಬೆಂಗಳೂರು : ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಪರೀಕ್ಷೆ 2018 ರ ಅಕ್ಟೋಬರ್ 11 ರಿಂದ 23 ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಅ. 11 ರ ಗುರುವಾರ ಎಜುಕೇಷನ್ ಮತ್ತು ಲಾಜಿಕ್, 12 ರಂದು ಸಮಾಜಶಾಸ್ತ್ರ, ಮರಾಠಿ, 13 ರಂದು ಇತಿಹಾಸ ಮತ್ತು ತೆಲುಗು ಹಾಗೂ 14 ರಂದು ಕನ್ನಡ ಭಾಷೆ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.

15 ರಂದು ಇಂಗ್ಲಿಷ್, ಭೌತಶಾಸ್ತ್ರ, ರಸಾಯನಶಾಸ್ತ್ರ, 16 ರಂದು ಬ್ಯುಸನೆಸ್ ಸ್ಟಡಿ, ಭೂಗೋಳಶಾಸ್ತ್ರ, ಹಿಂದಿ, 21 ರಂದು ಕನ್ನಡ, ಸ್ಟ್ಯಾಟಿಸ್ಟಿಕ್ಸ್, 22 ರಂದು ರಾಜ್ಯಶಾಸ್ತ್ರ, ಗಣಿತ ಮತ್ತು 23 ರಂದು ಅರ್ಥಶಾಸ್ತ್ರ, ಮನಃಶಾಸ್ತ್ರ, ಸಂಸ್ಕೃತ ಹಾಗೂ ಉರ್ದು ವಿಷಯಗಳ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.