ಮಂಡ್ಯ: ಕಾಂಗ್ರೆಸ್ ಪಕ್ಷದಲ್ಲಿದ್ದು ಕೊನೆಗೆ ಬೇಸತ್ತು ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಹೊರ ಬಂದು ನನಗೆ ರಾಜಕೀಯ ಬೇಡ ಅಂತ ಹೇಳುತ್ತಿದ್ದ ಮಾಜಿ ಮಂತ್ರಿ ಅಂಬರೀಶ್  ಮಂಡ್ಯ  ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಲು ಮುಂದಾಗಿದ್ದಾರಂತೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಬಗ್ಗೆ ಕಳೆದ ಐದು ದಿವಸದ ಹಿಂದೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಗೃಹ ಕಚೇರಿಯಲ್ಲಿ ಭೇಟಿಯಾಗಿ ಅಂಬರೀಶ್ ಭೇಟಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ತಾವು ಜೆಡಿಎಸ್ ನಿಂದ ಸ್ಪರ್ಧೆ ಮಾಡುವುದರ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಅಂಬರೀಶ್ ಅವರ ಮನದಾಳದ ಮಾತುಗಳನ್ನು ಕೇಳಿಸಿಕೊಂಡಿರುವ ಸಿಎಂ ಈ ಬಗ್ಗೆ ಪಕ್ಷದ ನಾಯಕರು, ವರಿಷ್ಠರು ಹಾಗೂ ಮಂಡ್ಯದ ಜನತೆ, ಸ್ಥಳೀಯ ಜೆಡಿಎಸ್ ನಾಯಕರುಗಳ ಜೊತೆಗೆ ಚರ್ಚೆ ಮಾಡಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಅಂತ ಹೇಳಿದ್ದಾರಂತೆ ಇದರಿಂದ ಮಂಡ್ಯ ಜಿಲ್ಲೆಯಲ್ಲಿ ಅಂಬರೀಶ್ ಜೆಡಿಎಸ್ ಪಕ್ಷಕ್ಕೆ ಬರುವುದರಿಂದ ಪಕ್ಷಕ್ಕೆ ಡಬಲ್ ಧಮಾಕ ಆಗುತ್ತದೆ ಎಂಬುದು ಸುದ್ದಿ.