ನವದೆಹಲಿ: : ಭಾರತಕ್ಕೆ ಕೊರೊನಾ ವೈರಸ್ ಭೀತಿಯ ನಡುವೆಯೇ ಅಂಫಾನ್ ಚಂಡಮಾರುತದ ಭೀತಿ ಎದುರಾಗಿದ್ದು, ಪಶ್ಚಿಮ ಬಂಗಾಳ ಮತ್ತು ಒಡಿಶಾಗೆ ಅಪ್ಪಳಿಸಿರುವ ಅಂಫಾನ್ ಚಂಡಮಾರುತ 10 ಜನರನ್ನು ಬಲಿಪಡೆದುಕೊಂಡಿದೆ.!

ಬುಧವಾರ ಮಧ್ಯಾಹ್ನ 2.30 ಗಂಟೆಗೆ 160-170 ಕಿ.ಮೀ ವೇಗದಲ್ಲಿ ಭೂಭಾಗ ಪ್ರವೇಶಿಸಿದ ಮಾರುತ ಪಶ್ಚಿಮ ಬಂಗಾಳದ ದಿಘಾ ಮತ್ತು ಬಾಂಗ್ಲಾದೇಶದ ಹತಿಯಾ ನಡುವೆ ಸುಂದರ್ ಬನ್ಸ್ ಮೂಲಕ ಹಾದು ಹೋಗಿದೆ. ಮೊದಲಿಗೆ ಬಾಂಗ್ಲಾದಲ್ಲಿ ಅಬ್ಬರಿಸಿದ ಅಂಫಾನ್ ಕರಾವಳಿ ಪ್ರದೇಶದಲ್ಲಿನ ಜನರನ್ನು ಸ್ಥಳಾಂತರ ಮಾಡುತ್ತಿದ್ದ ರೆಡ್ ಕ್ರೆಸೆಂಟ್ ನ ಸ್ವಯಂಸೇವಕರನ್ನು ಬಲಿ ತೆಗೆದುಕೊಂಡಿದೆ.

ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿತ್ತು. ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶದಲ್ಲಿರುವ 5 ಲಕ್ಷ ಮತ್ತು ಒಡಿಶಾದ 1.58 ಲಕ್ಷ ಜನರನ್ನು ಸ್ಥಳಾಂತರಿಸಲಾಗಿತ್ತು. ಆದರೂ ಇನ್ನು ಎರಡು ದಿನ ಅಂಫಾನ್ ಪ್ರಭಾವ ಬೀರಲಿದೆ ಯಂತೆ.!