ಬೆಂಗಳೂರು : ಆವತ್ತು ನಾನು ಓದುತ್ತಿರಲಿಲ್ಲ. ಅಂದು ಇಷ್ಟು ಓದಿದ್ದರೆ ನಾನು ಸರ್ಕಾರಿ ನೌಕರಿ ಪಡೆಯುತ್ತಿದ್ದೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಯವರು ತಮ್ಮ ಮನದಾಳ ಮಾತುಗಳನ್ನು ಹೇಳಿದ್ದು ಜಯನಗರದ ನ್ಯಾಷನಲ್ ಕಾಲೇಜಿನ ಕಾರ್ಯಕ್ರಮದಲ್ಲಿ.

ಸಿಎಂ ಕುಮಾರಸ್ವಾಮಿ, ತಮ್ಮ ಹಳೆಯ ದಿನಗಳನ್ನು ನನೆಸಿಕೊಂಡು ಮಾತನಾಡುತ್ತಾ, ಹುಡುಗಾಟಿಕೆ ಮಾಡಿಕೊಂಡೇ ಹೋದರೆ ವಿದ್ಯಾರ್ಥಿಗಳು ಸಾಧನೆ ಮಾಡಲು ಆಗಲ್ಲ. ನಾನು ಹಿಂದಿನ ಲಾಸ್ಟ್ ಬೆಂಚ್ ನಲ್ಲಿ ಕೂರುತ್ತಿದೆ. ಎಲ್ಲಿ ನನಗೆ ಪ್ರಶ್ನೆ ಕೇಳುತ್ತಾರೋ ಎಂಬ ಭಯ ಇರುತ್ತಿತ್ತು. ನ್ಯಾಷನಲ್ ಕಾಲೇಜ್ ಗೆ ಈಗ ಬರುವುದಕ್ಕೆ ರೋಮಾಂಚಕ ಅನಿಸುತ್ತದೆ ಎಂದರು.

ನಾನು ವೀಕ್ ಸ್ಟೂಡೆಂಟ್, ನನಗೂ ನನ್ನ ಅಪ್ಪ ಯಾವಾಗ್ಲೂ ನೀನು ಉದ್ದಾರ ಆಗಲ್ಲ ಅಂತ ಹೇಳುತ್ತಿದ್ದರು. ಗುರಿ ಇಟ್ಟು ಹೊರಟೆ, ಸಂಸತ್ ಸ್ಥಾನಕ್ಕೆ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದೆ ಹಳೆಯದನ್ನು ಮೆಲಕುಹಾಕಿದರು.