ಬೆಂಗಳೂರು:  ಪ್ರತಿಯೊಂದು ಬಸ್ ನ ಹೊರ ಕವಚದಲ್ಲಿ ಏನೆಲ್ಲಾ ಚಿತ್ತಾರ ಬಿಡಿಸಿರುವುದನ್ನು ನೋಡಿರ್ತೀರ. ಮಗು ಚಿತ್ರವೋ ಇಲ್ಲ ಹುಲಿ ಹೀಗೆ ಬಸ್ ಮಾಲೀಕನ ಟೇಸ್ಟ್ ಗೆ ತಕ್ಕಂತೆ ಚಿತ್ರ ಇರುತ್ತೆ. ಆದ್ರೆ ಇಲ್ಲೊಂದು ಬಸ್ ಹೊರಕವಚದ ಮೇಲೇ ಎಂತಂತ ಚಿತ್ರ ಹಾಕಿದ್ದಾರೆ ಅಂದ್ರೆ…!

ಕೇರಳದ ತಿರುವನಂತಪುರದಲ್ಲಿ  ಖಾಸಗಿ ಬಸ್‌ ಮಾಲೀಕರೊಬ್ಬರು, ತಮ್ಮ ಬಸ್‌ ತುಂಬೆಲ್ಲಾ ನೀಲಿ ಚಿತ್ರಗಳ ತಾರೆಯರೆ ಚಿತ್ರವನ್ನೇ ಹಾಕಿ ಜನರ ಗಮನ ಸೆಳೆಯುವ ಯತ್ನ ಮಾಡಿದ್ದಾರೆ. ನೀಲಿ ಚಿತ್ರ ತಾರೆಯರಾದ ಮಿಯಾ ಖಲೀಫಾ, ಜೊನಿ ಸಿನ್ಸ್‌, ಜೊರ್ಡಿ ಎಲ್‌ ನಿನಿ, ಕಾಟ್ರ್ನಿ ಕೇನ್‌ ಮತ್ತು ಸನ್ನಿ ಲಿಯೋನ್‌ ಅವರ ಚಿತ್ರಗಳು ಹಾಕಿದ್ದಾರೆ. ಈ ಬಸ್‌ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.