ಬೆಂಗಳೂರು: ಅಂತರ ಜಿಲ್ಲಾ ಪ್ರಯಾಣಕ್ಕೆ ಹೋಗುವ, ವಾಪಸ್ ಬರುವ ಎರಡೂ ಕಡೆಯ ಪಾಸು ನೀಡಲಾಗುತ್ತದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, ಇಷ್ಟು ದಿನ ಒಂದು ಕಡೆಯ ಪಾಸ್ ಮಾತ್ರ ನೀಡಲಾಗುತ್ತಿತ್ತು. ರಾಜ್ಯದ ಜನರ ಬೇಡಿಕೆ ಹಿನ್ನಲೆಯಲ್ಲಿ ಎರಡೂ ಕಡೆಯ ಪಾಸು ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. ಇಷ್ಟು ದಿನ ನೀಡುತ್ತಿದ್ದ ಪಾಸು ಒಂದು ದಿನದ, ಒಂದು ಕಡೆಯ ಮತ್ತು ಒಂದು ಅವಧಿಯ ಪಾಸ್ ಮಾತ್ರ ಆಗಿತ್ತು ಈಗ ಎರಡು ಕಡೆ ಪಾಸ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ.