ನವದೆಹಲಿ: ದೇಶಾದ್ಯಂತ ಲಾಕ್‍ಡೌನ್ ಆಗಿರುವ ಹಿನ್ನೆಲೆ ಅಂಚೆ ಜೀವ ವಿಮೆ ಮತ್ತು  ಗ್ರಾಮೀಣ ಅಂಚೆ ಜೀವ ವಿಮೆ ಪ್ರೀಮಿಯಂ ಪಾವತಿ ದಿನಾಂಕವನ್ನು ಏಪ್ರಿಲ್ 30ರವರೆಗೆ ವಿಸ್ತರಿಸಲಾಗಿದೆ.

ಪ್ರೀಮಿಯಂ ಪಾವತಿ ಅಂತಿಮ ದಿನ ಮಾರ್ಚ್ 30 ಆಗಿತ್ತು. ಮುಂದಿನ ತಿಂಗಳು ಪ್ರೀಮಿಯಂ ಪಾವತಿಸುವಾಗ ಯಾವುದೇ ದಂಡ ವಸೂಲಿ ಮಾಡಲಾಗುವುದಿಲ್ಲ ಎಂದು ಅಂಚೆ ಇಲಾಖೆ ತಿಳಿಸಿದೆ.