ಬೆಂಗಳೂರು:  ‘ಭಾರತೀಯಪ್ರಜೆಗಳೆಲ್ಲರೂಕಾನೂನುಗಳಬಗ್ಗೆತಿಳಿದಿರಲೇಬೇಕು. ಮಹಿಳಾಕಾನೂನುಗಳಕುರಿತು ಈ ಕೃತಿಯುಸಮಗ್ರಮಾಹಿತಿನೀಡಿದೆ’ ಎಂದುಸ್ತ್ರೀವಾದಿಚಿಂತಕಿ, ವಕೀಲೆಹೇಮಲತಾಮಹಿಷಿ ಅವರು ತಿಳಿಸಿದರು.

ಅಂಕಿತ ಪುಸ್ತಕ ಪ್ರಕಟಿಸಿರುವ ಹಿರಿಯಸಾಹಿತಿಸಿ.ಎನ್. ರಾಮಚಂದ್ರರಾವ್‌ ಅವರ ‘ಕಾನೂನುಮತ್ತುಮಹಿಳೆ’ ಕೃತಿಬಿಡುಗಡೆಕಾರ್ಯಕ್ರಮವುಇಂದುಬುಕ್‌ ಬ್ರಹ್ಮ ಫೇಸ್‌ಬುಕ್‌ ಲೈವ್‌ನಲ್ಲಿನಡೆಯಿತು.

ಪುಸ್ತಕದಕುರಿತು ಮಾತನಾಡಿದ ಹಿರಿಯ ಪತ್ರಕರ್ತಪದ್ಮರಾಜದಂಡಾವತಿ ‘ಭಾರತದಸಂವಿಧಾನದಲ್ಲಿ ಎಲ್ಲರೂ ಸಮಾನರು. ಪುರುಷ ರೂಪಿಸಿದ ಕಾನೂನಿನಲ್ಲಿಯೂ ಮಹಿಳೆಯನ್ನು ಎರಡನೇ ದರ್ಜೆಪ್ರಜೆಯನ್ನಾಗಿನೋಡಲಾಗುತ್ತಿದೆ’  ಎಂದು ಬೇಸರ ವ್ಯಕ್ತಪಡಿಸಿದರು. 

ಕೃತಿ ಕುರಿತುಮಾತನಾಡಿದ ಅವರು ಮಹಿಳೆಯರಮೇಲೆ ದೌರ್ಜನ್ಯಪ್ರಕರಣಗಳು ಹೆಚ್ಚುತ್ತಿದ್ದು, ಅಪರಾಧಿಗಳಿಗೆ ಶಿಕ್ಷೆಆಗುತ್ತಿರುವ ಪ್ರಮಾಣ ತೀರಾ ಕಡಿಮೆ. ಕಾನೂನುಗಳು ಬಲಿಷ್ಠಗೊಳ್ಳಬೇಕು. ಕಾನೂನುಮತ್ತುಮಹಿಳೆ ಕೃತಿಯು ಎಲ್ಲರಿಗೂ ಮಹಿಳಾ ಕಾನೂನುಗಳ ಕುರಿತು ಅರಿವು ಮೂಡಿಸುವಂತಕೃತಿಯಾಗಿದೆ’ ಎಂದರು.

ಹಿರಿಯ ಸಾಹಿತಿಸಿ. ಎನ್. ರಾಮಚಂದ್ರರಾವ್‌ ಅವರುಮಥುರಾ, ಬನ್ವಾರಿದೇವಿಪ್ರಕರಣಗಳನ್ನು ಉದಾಹರಣೆ ನೀಡಿ ಮಹಿಳಾಕಾನೂನುಗಳ ವೈಫಲ್ಯವನ್ನು ವಿವರಿಸಿದರು.

ಲೇಖಕವಸುಧೇಂದ್ರಅವರುಹೇಮಲತಾಮಹಿಷಿ, ಸಿ.ಎನ್. ರಾಮಚಂದ್ರರಾವ್‌ ಹಾಗೂಪದ್ಮರಾಜದಂಡಾವತಿಅವರೊಂದಿಗೆಸಂವಾದನಡೆಸಿದರು. 

ಲೈವ್‌ ವೀಡಿಯೋವೀಕ್ಷಿಸಲು ಈ ಲಿಂಕ್‌ ಮೇಲೆಕ್ಲಿಕ್‌ ಮಾಡಿ: https://bit.ly/3444jCZ