ಸುರಿವ ಬೆಳಕಿಗೆ ಗುಡಿಸಲು ಅರಮನೆ ಬೇಧವಿಲ್ಲ ಬೆಳಗುವುದರ ಹೊರತು

ಬಿರಿವ ಹೂವಿಗೆ ದೇವಳ ಸ್ಮಶಾನ ಬೇರೆಯಲ್ಲ ಅರಳುವುದರ ಹೊರತು

 

ಹಿಟ್ಟಿಗೆ ಹೊಟ್ಟೆ ಸೇರಿ ಉಪವಾಸ ನೀಗಿಸುವುದಷ್ಟೇ ಗೊತ್ತು

ಬಡಿವ ರೊಟ್ಟಿಗೆ ಚಿನ್ನ ತಾಮ್ರದ ತಟ್ಟೆಯ ಹಂಗಿಲ್ಲ ಹಸಿವು ನೀಗಿಸುವುದರ ಹೊರತು

 

ಬಿರುಕು ಚಪ್ಪರದ ಕಿಂಡಿಯಿಂದ ನಗು ನರಳಿಕೆಗೂ ದಾರಿಯಿದೆ

ಗಟ್ಟಿ ಗೋಡೆಗೆ ಕಿವಿಗಳಿಲ್ಲ ಹುಟ್ಟಿಗೂ ಸಾವಿಗೂ ಮೌನವಾಗುವುದರ ಹೊರತು

 

ಒಡಲ ಬೆಂಕಿಗೆ ಸುರಿದುಕೊಂಡ ಅನ್ನಕ್ಕೆ ಎಲ್ಲರ ಪಾಲಿದೆ

ಹಸಿವಿಗೆ ಮನುಜಗೂ ಮಾರ್ಜಾಲಕ್ಕೂ ಉಸಿರಾಗುವುದರ ಹೊರತು

 

ಹಸಿ ಬಡತನ ಹೆಮ್ಮರವಾಗಿ ಬೇರು ಬಿಟ್ಟಿರಲಿ ಬಿಡು ಸಾವನ್

ಕಲಿಸಲಿ ಬಿಡು ಅದಕ್ಕೆ ಕೊರತೆ ಒರತೆಯ ಪಾಠವಾಗುವುದರ ಹೊರತು.

 

# ಸಾವನ್ ಕೆ ಸಿಂಧನೂರು

ಮೊ 9902858592