ಚಿತ್ರದುರ್ಗ: ಕಾವ್ಯಾಸಕ್ತರಿಗೆ ಬೆಳದಿಂಗಳ ರಸದೌತಣವನ್ನು ಚಿತ್ರದುರ್ಗದಲ್ಲಿ ನೀಡಲು ಸಿದ್ದನಿದ್ದೇನೆ ಎಂದು ನಿವೃತ್ತ ಐ.ಎ.ಎಸ್.ಅಧಿಕಾರಿ ಕೆ.ಅಮರನಾರಾಯಣ ಆಶ್ವಾಸನೆ ನೀಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಜಿಲ್ಲಾ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಸೆಕೆಂಡರಿ ಶಿಕ್ಷಕರ ಸಂಘ, ಡಾ.ರಾಜ್‌ಕುಮಾರ್ ಕಲಾ ವೇದಿಕೆ, ಸಮತಾ ಸಾಹಿತ್ಯ ವೇದಿಕೆ, ಕರ್ನಾಟಕ ಲೇಖಕಿಯರ ಸಂಘ ಹಾಗೂ ದಿವ್ಯಾಂಗರ ಬಳಗ ಇವರುಗಳು ಸಂಯುಕ್ತಾಶ್ರಯದಲ್ಲಿ ಐ.ಎಂ.ಎ.ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಕಾವ್ಯ ರಚಿಸಿ ಪ್ರಸಿದ್ದ ಕವಿಗಳಾ ಭಾವನೆಗಳನ್ನು ಹೇಳಬೇಕಾದರೆ ಲಯಬದ್ದವಾಗಿ ಕವನಗಳ್ನು ವಾಚನ ಮಾಡಬೇಕು. ದ.ರಾ.ಬೇಂದ್ರೆ, ಕುವೆಂಪು, ಶಿವರುದ್ರಪ್ಪ, ಗೋಪಾಲಕೃಷ್ಣ ಅಡಿಗರವರ ಕಾವ್ಯಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿದ್ದೇನೆ. ಅಂತಹ ಕಾವ್ಯಗಳನ್ನು ಚಿತ್ರದುರ್ಗದಲ್ಲಿಯೇ ಮಾಡಬೇಕೆಂದುಕೊಂಡಿದ್ದೇನೆ. ಅದಕ್ಕಾಗಿ ನಿಮ್ಮಗಳೆಲ್ಲರ ಸಹಕಾರ ಬೇಕು ಎಂದು ದಿವ್ಯಾಂಗರು ಹಾಗೂ ಕವಿಗಳಲ್ಲಿ ಮನವಿ ಮಾಡಿದರು.
ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ಕವಿಗಳಿದ್ದಾರೆ. ಹತ್ತು ಕವನ ಹಾಗೂ ಕವಿಗಳನ್ನು ಆಹ್ವಾನಿಸಿ ಕವನ ವಾಚನ ಮಾಡಿಸಿ ಬೆಳದಿಂಗಳಲ್ಲಿ ಸಂಗೀತ ಸಿಂಚನದ ಮೂಲಕ ಕವಿಗಳು ಹಾಗೂ ಮಕ್ಕಳಲ್ಲಿರುವ ಸಾಹಿತ್ಯಾಸಕ್ತಿಯನ್ನು ಹೊರತರಬೇಕಿದೆ. ಮೈಸೂರಿನ ದಸರಾದಲ್ಲಿ ವಿಶೇಷಾಧಿಕಾರಿಯಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದೇನೆ. ಚಿತ್ರದುರ್ಗದಲ್ಲಿ ಪ್ರತಿ ವರ್ಷವೂ ಮುರುಘಾಮಠದಿಂದ ನಡೆಯುವ ಶರಣ ಸಂಸ್ಕೃತಿ ಉತ್ಸವದಲ್ಲಿ ಸಾಹಿತ್ಯಕವಿಗೋಷ್ಠಿಯನ್ನು ಮಾಡಬಹುದು ಎಂದು ಹೇಳಿದರು.
ಕವನ ಹಾಗೂ ಸಾಹಿತ್ಯದಲ್ಲಿ ಆಸಕ್ತಿಯಿರುವ ದಿವ್ಯಾಂಗರು, ಮಹಿಳೆಯರು, ಪುರುಷರು ಹಾಗೂ ಮಕ್ಕಳು ಹೀಗೆ ಅನೇಕ ಪ್ರಾಕಾರಗಳನ್ನು ಜೊತೆಗೂಡಿಸಿ ಸುಪ್ತ ಕಾವ್ಯವನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಅದಕ್ಕಾಗಿ ಚಿತ್ರದುರ್ಗದಲ್ಲಿ ಬೆಳದಿಂಗಳ ಸಂಗೀತ ರಸದೌತಣವನ್ನು ನೀಡಲು ತಯಾರಾಗಿದ್ದೇನೆ ಎಂದು ಭರವಸೆ ಕೊಟ್ಟರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು.
ದಿವ್ಯಾಂಗರ ಬಳದ ಅಧ್ಯಕ್ಷ ಕೆ.ಹೆಚ್.ಜಯಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷೆ ದಯಾಪುತ್ತೂರ್ಕರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಮಾಲತೇಶ್‌ಅರಸ್, ವಿಕಲಚೇತನ ಕಲ್ಯಾಣಾಧಿಕಾರಿ ವೈಶಾಲಿ, ಕೆ.ಪರಶುರಾಂಗೊರಪ್ಪನರ್, ಓ.ವೆಂಕಟೇಶ್‌ನಾಯ್ಕ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಲಲಿತಾಕೃಷ್ಣಮೂರ್ತಿ, ಪತ್ರಕರ್ತ ನರೇನಹಳ್ಳಿ ಅರುಣ್‌ಕುಮಾರ್ ವೇದಿಕೆಯಲ್ಲಿದ್ದರು.
ಗಂಜಿಗಟ್ಟೆ ಕೃಷ್ಣಮೂರ್ತಿ ಪ್ರಾರ್ಥಿಸಿದರು. ಶಿಕ್ಷಕ ಕೆ.ಗಂಗಾಧರ್ ಸ್ವಾಗತಿಸಿದರು. ಹುರಳಿ ಬಸವರಾಜ್ ನಿರೂಪಿಸಿದರು.
ಸುಶೀಲಸಾಂಬಶಿವಯ್ಯ, ಜಗನ್ನಾಥ್, ನಾಗರಾಜ್ ಅರ್ಕಾಚಾರ್, ಜಿ.ಎನ್.ಪ್ರಭು, ಅಣ್ಣಪ್ಪಬಾನುವಳ್ಳಿ, ಹಂಸಿನಿ, ಶಶಿಸ್ವಾಮಿ, ಮಾಲತಿ, ಎಂ.ಬಿ.ನಾಗರತ್ನ, ಬಸಮ್ಮ, ಗೀತಾಬೆಣ್ಣೆಹಳ್ಳಿ, ಸುಲೋಚನಾ, ನಿರ್ಮಲ ಮಂಜುನಾಥ್ ಇನ್ನು ಅನೇಕ ಕವಿಗಳು ಕವನ ವಾಚಿಸಿದರು.