ಗುಣದಲ್ಲಿ ನನ್ನ ಇನಿಯ ಶುದ್ಧ ಒರಟ
ಪ್ರೀತಿಯಲಿ ಇದರಿಂದ ತುಂಬಾ ಸೆಣಸಾಟ
ಮೌನಿ ನಾನು, ಮಾತು ಅವನು
ಆದರೂ ಅರಿತಿರುವನು ನನ್ನ ಮನಸ್ಸನು
ಅವನಿಗೆ ತಿಳಿಯದು ಪ್ರೀತಿ ವ್ಯಕ್ತಪಡಿಸುವ ರೀತಿ
ಆದರೆ ತಿಳಿದಿರುವನು ಪ್ರೀತಿಯ ನೀತಿ
ಸದಾ ನುಡಿಯುವನು ನಿನ್ನ ಬಿಟ್ಟಿರಲು ಅಸಾಧ್ಯ
ನನ್ನ ಮೌನದಲ್ಲೆ ಅರ್ಥೈಸಿಕೊಳ್ಳುವನು ಪ್ರೀತಿಯಲ್ಲಿ ಎಲ್ಲವೂ ಸಾಧ್ಯ
ನಾ ಎಣಿಸಿರುವೆ ನನ್ನ ಮನದಲ್ಲಿ
ಏಳು ಜನ್ಮದಲ್ಲಿಯೂ ಈ ಪ್ರೀತಿ ನನ್ನದಾಗಲಿ
ಅವನು ಹೇಳುವನು ಏಳು ಜನ್ಮದ ಪ್ರೀತಿ
ಈ ಜನ್ಮದಲ್ಲೇ ನೀಡುವುದು ನನ್ನ ರೀತಿ
ಮುಕ್ತ ಹೃದಯದ ಅವನ ನಗು
ಇಷ್ಟವಾಗುವುದು ನನ್ನ ಮನಸ್ಸಿಗು
ಏನನ್ನು ಬಚ್ಚಿಡದ ಅವನ ನಡತೆ
ನನ್ನ ಪ್ರೀತಿಗೆ ಮಾಡಿಲ್ಲ ಕೊರತೆ
ನಮ್ಮ ಪ್ರೀತಿಯಲಿ ಸದಾ ಇರಲಿ ಪರಿಶುದ್ಧತೆ
ಸದಾ ಹಸಿರಾಗಿರಲಿ ಇದರ ಸ್ವಚ್ಚಂದತೆ
ಬಾನಲ್ಲಿ ಸದಾ ಮಿನುಗುವ ರವಿಯಂತೆ
ನಮಲ್ಲಿರಲಿ ನಿತ್ಯ ಪ್ರೀತಿಯೆಂಬ ಸಂತೆ

 -ವೀಣಾ.ಕೆ.ಎಸ್.
ಪಿ.ಎಚ್.ಡಿ.ಸಂಶೋಧನಾ ವಿದ್ಯಾರ್ಥಿನಿ,
ಸಮಾಜಶಾಸ್ತ್ರಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ,
ಜ್ಞಾನ ಸಹ್ಯಾದ್ರಿ, ಶಂಕರಘಟ್ಟ.