ವಾಷಿಂಗ್ಟನ್: ಭಾರತದ ಖ್ಯಾತ ವಾಹನ ತಯಾರಕ ಮಹೀಂದ್ರಾ&ಮಹೀAದ್ರಾ ಉತ್ತರ ಅಮೆರಿಕಾದ ತನ್ನ ಉತ್ಪಾದನಾ ಘಟಕಗಳಲ್ಲಿ ಅರ್ಧದಷ್ಟು ಉದ್ಯೋಗಿಗಳನ್ನು ಕಡಿತಗೊಳಿಸಿದೆ ಎಂದು ರಾಯಿಟರ್ಸ್ ಮಾಹಿತಿ ನೀಡಿದೆ.

೨೦೨೦ರ ಆರಂಭದಲ್ಲಿ ಮಹೀಂದ್ರಾ&ಮಹೀ0ದ್ರಾ ಉತ್ಪಾದನಾ ಘಟಕದಲ್ಲಿ 500ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದರು. ಆದರೆ ಇದರಲ್ಲಿ ಅರ್ಧದಷ್ಟು ಜನರು ಕೆಲಸ ಕಡೆದುಕೊಂಡಿರಬಹುದು ಎನ್ನಲಾಗಿದ್ದು ನಿಖರ ಸಂಖ್ಯೆಯನ್ನು ಇನ್ನೂ ತಿಳಿಸಲಾಗಿಲ್ಲ.

ಕೋವಿಡ್-೧೯ ಸಾಂಕ್ರಾಮಿಕ ರೋಗ ಮತ್ತು ಕಾನೂನಿಗೆ ಸಂಬ0ಧಪಟ್ಟ0ತೆ ಇರುವ ತೊಂದರೆಗಳನ್ನು ಇಟ್ಟುಕೊಂಡು ಲಾಭದಲ್ಲಿ ಇರುವ ಅಥವಾ ಮುಂದೆ ಲಾಭ ತಂದುಕೊಡಬಲ್ಲವುಗಳನ್ನು ಮಾತ್ರ ಉಳಿಸಿಕೊಳ್ಳುವ ಉದ್ದೇಶವನ್ನು ಕಂಪನಿಯು ಹೊಂದಿದೆ.
2020ರ ಮಧ್ಯಭಾಗದಿಂದ ಮಹೀಂದ್ರಾ ಅಟೋಮೋಟಿವ್ ನಾರ್ತ್ ಅಮೆರಿಕದ ನೂರಾರು ಕಾರ್ಮಿಕರನ್ನು ವಜಾಗೊಳಿಸುತ್ತಾ ಬಂದಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ಕೆಲವು ಸಿಬ್ಬಂದಿಗಳನ್ನು ರಜೆ ಮೇಲೆ ಕಳುಹಿಸಲಾಗಿದೆ ಮತ್ತು ಇನ್ನೂ ಕೆಲವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಕೆಲಸ ಕಳೆದುಕೊಂಡ ಜನರಲ್ಲಿ ಎಂಜಿನಿಯರ್‌ಗಳು ಮತ್ತು ಉತ್ಪಾದನಾ ಘಟಕದಲ್ಲಿ ವಾಹನಗಳ ತಯಾರಿಕೆಯ ಕಾರ್ಮಿಕರು ಸೇರಿದ್ದಾರೆ. ಹಾಗೂ ಜೊತೆಗೆ ಅಧಿಕಾರಿಗಳನ್ನು ಒಳಗೊಂಡಿದೆ.