ಜಿನೀವ: ಬ್ರಿಟನ್ನಲ್ಲಿ ಮೊದಲು ಪತ್ತೆಯಾದ ರೂಪಾಂತರಿತ ಕೊರೋನ ವೈರಸ್ ಈಗ 50 ದೇಶಗಳಿಗೆ ಹರಡಿದೆ. ದಕ್ಷಿಣ ಆಫ್ರಿಕದಲ್ಲಿ ಮೊದಲು ಪತ್ತೆಯಾದ ಕೊರೋನ ವೈರಸ್ ಪ್ರಭೇದವು 20 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.
ಜಪಾನ್ನಲ್ಲಿ ಪತ್ತೆಯಾಗಿರುವ ಮೂರನೇ ರೂಪಾಂತರಿತ ಕೊರೋನ ವೈರಸ್ ಮಾದರಿಯು ದೇಹದ ರೋಗ ನಿರೋಧಕ ವ್ಯವಸ್ಥೆಯು ಕೆಲಸದ ಮೇಲೆ ಪರಿಣಾಮ ಬೀರಬಹುದಾಗಿದೆ ಎಂದು ಅದು ಹೇಳಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಯ ಅಗತ್ಯವಿದೆ ಎಂದಿದೆ.
ಕೊರೋನ ವೈರಸ್ ಹೆಚ್ಚೆಚ್ಚು ಹರಡಿದಷ್ಟು, ರೂಪಾಂತರಗೊಳ್ಳಲು ಅದಕ್ಕೆ ಲಭಿಸುವ ಅವಕಾಶಗಳೂ ಹೆಚ್ಚುತ್ತವೆ. ಗರಿಷ್ಠ ಮಟ್ಟದಲ್ಲಿ ಸೋಂಕು ಹರಡಿದೆಯೆಂದರೆ, ಕೊರೋನ ವೈರಸ್ನ ಹೆಚ್ಚಿನ ರೂಪಾಂತರಿಕ ಪ್ರಭೇದಗಳು ಹೊರಹೊಮ್ಮುತ್ತವೆ ಎಂದು ನಾವು ತಿಳಿಯಬೇಕು ಎಂದು ತಿಳಿಸಿದೆ.
No comments!
There are no comments yet, but you can be first to comment this article.