ಬೆಂಗಳೂರು : ಈರುಳ್ಳಿ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಈರುಳ್ಳಿ ದಾಸ್ತನಿನ ಮೇಲೆ ಕೇಂದ್ರ ಸರ್ಕಾರ ಮಿತಿ ವಿಧಿಸಿದ ಬೆನ್ನಲ್ಲೇ ಈರುಳ್ಳಿ ದರ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ 150 ರೂ. ಗಡಿ ಸಮೀಪಿಸಿದ್ದ ಈರುಳ್ಳಿ ಬೆಲೆಯಲ್ಲಿ ನಿನ್ನೆ 64 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಮಂಡಿಗಳಲ್ಲೂ ಈರುಳ್ಳಿ ಆವಕ ಪ್ರಮಾಣ ಹೆಚ್ಚಾಗಿದೆ. ಈರುಳ್ಳಿ ದರ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ದಾಸ್ತಾನಿನ ಮೇಲೆ ಅಕ್ಟೋಬರ್ 23 ರಂದು ಮಿತಿ ಹೇರಿತ್ತು. ಚಿಲ್ಲರೆ ವ್ಯಪಾರಿಗಳಿಗೆ 2 ಟನ್ ಮತ್ತು ಸಗಟು ವ್ಯಾಪಾರಿಗಳಿಗೆ 25 ಟನ್ ಮಿತಿ ಹೇರಲಾಗಿತ್ತು.

ಇನ್ನು ಮಹಾರಾಷ್ಟ್ರದಲ್ಲಿ 100 ರೂ. ಗಡಿ ದಾಟಿದ್ದ ಈರುಳ್ಳಿ ಕೆಜಿಗೆ 46 ರೂ.ಗೆ ಇಳಿಕೆ ಕಂಡಿದೆ. ಚೆನ್ನೈನಲ್ಲಿ 76 ರೂ.ನಿಂದ 66 ರೂ.ಗೆ ಇಳಿಕೆ ಕಂಡಿದ್ದು, ಮಂಗಳೂರಿನಲ್ಲಿ 120 ರೂ. ಗಡಿ ದಾಟಿದ್ದ ಈರುಳ್ಳಿ ಬೆಲೆ 64-68 ರೂ.ಗೆ ಮಾರಾಟವಾಗುತ್ತಿದೆ.