ಅಮೆರಿಕ: ಟ್ರಂಪ್ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದ್ದು, ನಂಬಲು ಸಾಧ್ಯವಾದ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಅಮೆರಿಕಾದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಈ ನಡೆಯಿಂದ ಅವರನ್ನು ಅತ್ಯಂತ ಬೇಜವಾಬ್ದಾರಿಯುತ ನಾಯಕ ಎಂದು ಅಮೆರಿಕಾದ ಇತಿಹಾಸವು ನೆನಪಿಸಿಕೊಳ್ಳುವುದು ಖಾತ್ರಿಯಾಗಿದೆ. ಪ್ರಜಾಪ್ರಭುತ್ವವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಜಗತ್ತಿನ ಇತರ ದೇಶಗಳಿಗೆ ಹಾನಿಕಾರಕ ಸಂದೇಶ ನೀಡಲಾಗುತ್ತಿದೆ ಎಂದು ಬೈಡನ್ ಹೇಳಿದ್ದಾರೆ ಎನ್ನಲಾಗಿದೆ.