ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ವಯಸ್ಸಾದ ಮೇಲೆ ಮೂಳೆಗಳು ದುರ್ಬಲವಾಗುತ್ತವೆ. ಆದರೆ, ಕೆಲವರಿಗೆ ಈ ಸಮಸ್ಯೆ ಮಧ್ಯ ವಯಸ್ಸಿನಲ್ಲಿಯೇ ಕಾಣಿಸುತ್ತದೆ ಇದಕ್ಕೇನು ಕಾರಣವಿರಬೇಕು ಎಂಬುದು ಕೆಲವರ ಪ್ರಶ್ನೆ.!
ವೈದ್ಯರು ಹೇಳುವಂತೆ ನಮ್ಮ ಆಹಾರದ ಕ್ರಮವೇ ಕಾರಣವಂತೆ. ಅಧಿಕ ಕಾಫಿ, ಪಿಜ್ಜಾ, ಬರ್ಗರ್, ಪಾಸ್ತಾ, ಮದ್ಯ ಸೇವನೆ ಮಾಡಿದರೆ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿ ಎಲುಬುಗಳು ದುರ್ಬಲಗೊಳ್ಳುತ್ತವೆ. ಅಲ್ಲದೇ, ವಿಟಮಿನ್ ಡಿ ಕೊರತೆಯಾಗುತ್ತದೆ. ವಿಟಮಿನ್ ಎ ಕೊರತೆ ನೀಗಿಸಲು ಸಪ್ಲಿಮೆಂಟ್ ಗಳನ್ನು ಸೇವಿಸುತ್ತಿದ್ದರೂ ಮೂಳೆಗಳು ದುರ್ಬಲಗೊಳ್ಳುತ್ತವೆ. ಇಂತಹ ಆಹಾರವನ್ನು ಸೇವಿಸದೇ ಇರುವುದು ಒಳಿತಂತೆ.!
ಕ್ಯಾಲ್ಸಿಯಂ ಅನ್ನು ಒಳಗೊಂಡಿರುವ ಉತ್ತಮ ಆಹಾರಗಳಾದ
ಹಾಲು
ಬೆಣ್ಣೆ
ಮೊಸರು
ಸಾರ್ಡೆçನ್ ಗಳು ಮತ್ತು ಮೀನುಗಳು
ಬಸಳೆ, ಟರ್ನಿಪ್ ಗಡ್ಡೆಯಂತಹ ದಟ್ಟ ಹಸುರು ಬಣ್ಣದ ಸೊಪ್ಪು ತರಕಾರಿಗಳು
ಪುಷ್ಟೀಕರಿಸಿದ ಕಾರ್ನ್ ಫ್ಲೇಕ್ಸ್
ಪುಷ್ಟೀಕರಿಸಿದ ಕಿತ್ತಲೆ ರಸ.
ಸೋಯಾಬೀನ್ಸ್
ಪುಷ್ಟೀಕರಿಸಿದ ಬ್ರೆಡ್ ಮತ್ತು ಕಾಳುಗಳು ನ್ನು ಬಳಸಿದರೆ ದೇಹಕ್ಕೆ ಬೇಕಾದಷ್ಟು ಕ್ಯಾಲ್ಸಿಯಂದೊರಯಲಿದೆ.
( ಸಾಂದರ್ಭಿಕ ಚಿತ್ರ)
No comments!
There are no comments yet, but you can be first to comment this article.