ಕ್ಯಾರೆಟ್‌-ಬೀಟ್‌ರೂಟ್‌ ಜ್ಯೂಸ್‌ ಕುಡಿಯಿರಿ. ಕ್ಯಾರೆಟ್‌ನನ್ನು ಚೆನ್ನಾಗಿ ತುರಿದು, ರಸ ತೆಗೆಯಿರಿ. ಈ ಕ್ಯಾರೆಟ್‌ ರಸವನ್ನು ದಿನ ನಿತ್ಯ ಕುಡಿಯಬಹುದು. ಅಲ್ಲದೆ ಬೀಟ್‌ರೂಟ್ ಜ್ಯೂಸ್‌ ಕುಡಿಯುವುದು ರಕ್ತದ ಒತ್ತಡ ಕಡಿಮೆ ಮಾಡುತ್ತದೆ. ಅಂತೆಯೇ ದಿನ ನಿತ್ಯದ ಊಟದಲ್ಲಿ ಉಪ್ಪಿನಂಶವನ್ನು ಕಡಿಮೆ ಬಳಸುವುದು ಹೆಚ್ಚು ಸೂಕ್ತ.

ಬೆಳ್ಳುಳ್ಳಿ ಬಿಡಬೇಡಿ: ದೇಹ ಹಾಗೂ ರಕ್ತನಾಳಗಳಲ್ಲಿರುವ ಕೆಟ್ಟ ಕೊಬ್ಬಿನಾಂಶವನ್ನು ಕರಗಿಸಲು ಬೆಳ್ಳುಳ್ಳಿ ಬಳಸುವುದು ಅತ್ಯಂತ ಸೂಕ್ತ. ನೈಸರ್ಗಿಕವಾಗಿ ಇವುಗಳು ರಕ್ತದ ಒತ್ತಡವನ್ನೂ ತಗ್ಗಿಸುತ್ತದೆ.

ಈರುಳ್ಳಿ ಮತ್ತು ಜೇನು ಬಳಸಿ ಒಂದು ಚಮಚದಷ್ಟು ಈರುಳ್ಳಿ ರಸ ಹಾಗೂ ಜೇನನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಂಡು ತೆಗೆದುಕೊಂಡರೆ, ರಕ್ತದ ಒತ್ತಡ ಕಡಿಮೆ ಮಾಡಲು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಪ್ರತಿದಿನ ಇದನ್ನು ಸೇವಿಸಬಹುದು

ಕರಿಬೇವು ದಕ್ಷಿಣ ಭಾರತದ ಅನೇಕ ಕಡೆ ಕರಿಬೇವು ಎಲೆಯನ್ನು ಔಷಧಿಗಾಗಿಯೇ ಬಳಸಲಾಗುತ್ತದೆ. ರಕ್ತದ ಒತ್ತಡ ಮಾತ್ರ ಅಲ್ಲ, ಅನೇಕ ಬೇರೆ ಆರೋಗ್ಯ ಸಮಸ್ಯೆಗೆ ಕರಿಬೇವು ರಾಮಬಾಣ ಎಂದೇ ನಂಬಿಕೆ ಇದೆ. ಒಂದು ಲೋಟ ನೀರಿಗೆ ನಾಲ್ಕೈದು ಕರಿಬೇವಿನ ಎಲೆ ಹಾಕಿ, ದಿನ ನಿತ್ಯ ಕುಡಿಯುವುದು ಬ್ಲಡ್‌ ಪ್ರಶರ್‌ ನಿಯಂತ್ರಣಕ್ಕೆ ಉತ್ತಮ!

ಹಾಗೆಂದು ಕೇವಲ ಮನೆ ಮದ್ದು ಮಾತ್ರ ಸಾಕೆಂದು ಕೂರುವುದು ಸರಿಯಲ್ಲ. ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳುವ ಔಷಧಿಗಳ ಜತೆ ಇಂತಹ ಮನೆ ಮದ್ದುಗಳನ್ನು ತೆಗೆದುಕೊಳ್ಳುವುದು ಇನ್ನಷ್ಟು ಒಳ್ಳೆಯದು!