ಬೆಂಗಳೂರು: ಇಂದಿನ ದಿನಮಾನದಲ್ಲಿ ಚಿಕ್ಕವರಿಗೂ ಹೃದಯಘಾತವಾಗುವುದನ್ನು ಕೇಳಿದ್ದೇವೆ. ಹಾಗಾಗಿ ಹೃದಯಘಾತವಾಗುವುದಕ್ಕೂ ಮುಂಚೆ ಏನೆಲ್ಲಾ ಆರೋಗ್ಯದಲ್ಲಿ ಏರು ಪೇರಾಗುತ್ತದೆ ಎಂಬಮಾಹಿತಿ ನಿಮಗಾಗಿ.

ಹೃದಯಘಾತ ದಿಡೀರ್ ಎಂದು ಬರುವುದಿಲ್ಲ, ವ್ಯಕ್ತಿಗೆ 12 ಗಂಟೆ ಅಥವಾ 24 ಗಂಟೆ ಮುಂಚಿತವಾಗಿ ಮುನ್ಸೂಚನೆ ಕೊಡುತ್ತೆ. ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಗ್ಯಾಸ್ಟ್ರಿಕ್‌ನಿಂದ ಎದೆನೋವು ಎಂದು ಭಾವಿಸಿ ಮುಂದೂಡಬಾರದು.  ಎಷ್ಟೋ ಜನಕ್ಕೆ ಇದು ಹೃದಯಾಘಾತದ ಲಕ್ಷಣ,  ಮುನ್ಸೂಚನೆ ಎಂದು ಅರಿವಾಗುವುದಿಲ್ಲ.  ಬೇರೆಯವರಿಗೂ ಮನೆಯವರಿಗೂ  ಹೇಳುವುದಿಲ್ಲ.

ಇಪರೀತ ಬೆವರುವುದು, ಸುಸ್ತಾಗುವುದು, ಯಾವುದಾದರು ರಟ್ಟೆ ವಿಪರೀತ ನೋಯುವುದು,*
ಎದೆ ಕಿವುಚಿದಂತೆ ಆಗುತ್ತದೆ ಆಗ ನಿರ್ಲಕ್ಷಿಸಬಾರದು. ಇಂಥ ಲಕ್ಷಣಗಳು ಹೆಚ್ಚಾಗಿ ನಡಿಗೆ ಮಾಡುವಾಗಲೂ, ಮೆಟ್ಟಿಲು ಹತ್ತುವಾಗಲೂ  ಕಾಣಿಸುತ್ತವೆ, ತಕ್ಷಣ ಆಸ್ಪತ್ರೆಯನ್ನು  ಸೇರಬೇಕು. ಹೃದಯಾಘಾತವಾದ  ಮೊದಲ ಅರ್ಧ ಗಂಟೆಯ ಸಮಯ ವ್ಯರ್ಥ ಮಾಡಬಾರದು. ತಕ್ಷಣ ಆಸ್ಪತ್ರೆಗೆ  ದಾಖಲಾಗಿ ಹೃದಯಘಾತದಿಂದ ತಪ್ಪಿಸಿಕೊಳ್ಳುವುದು ಉತ್ತಮ.!