ಹಾಗಲಕಾಯಿ ಅಂದ್ರೆ ಕಹಿ ಅಪ್ಪ ತಿನ್ನಕಾಗೊಲ್ಲ ಅಂತ ಸಿಂಡ್ರಿಸಿಕೊಳ್ಳುವವರೇ ಹೆಚ್ಚು. ಮಕ್ಕಳೇನು ದೊಡ್ಡವರು ಸಹ ಹಾಗಲಕಾಯಿ ಬಗ್ಗೆ ಒಂದು ರೀತಿ ಅಸಡ್ಡೆ.

ಹಿರಿಯರು ಹಾಗಲಾಕಾಯಿ ಬಗ್ಗೆ ವಿಶೇಷವಾದ ಮಹತ್ವವನ್ನು ನೀಡಿದ್ದಾರೆ. ವಾರಕ್ಕೆ ಒಂದು ಸಲವಾದ್ರೂ ಹಾಗಕಾಯಿ ತಿನ್ನ ಬೇಕು. ಪಲ್ಯ ಅಥವ ಸಾರು ಮಾಡಿಯಾದ್ರೂ. ಏಕೆಂದ್ರೆ ಹಾಗಲಕಾಯಿ ತಿಂದ್ರೆ ಒಂದು ಸೇರು ತುಪ್ಪ ತಿಂದಂತೆ ಎಂದು ಹೇಳುತ್ತಿದ್ದರು ಹಿರಿಯರು.

ಹಾಗಾದ್ರೆ ಹಾಗಕಾಯಿಯಲ್ಲಿ ಏನೇನು ಅಂಶವಿದೆ ಎಂದು ತಿಳಿದುಕೊಳ್ಳೋಣ.

  • ಹಾಗಲಕಾಯಿ ಆಹಾರದ ಬಳಕೆಯಿಂದ ಪಚನಕ್ರಿಯೆಯನ್ನು ಚುರುಕುಗೊಳಿಸುತ್ತದೆ.
  • ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಲ್ಲಿಸಹಯಮಾಡುತ್ತದೆ.
  • ಮಲೇರಿಯವನ್ನು ತಡೆಗಟ್ಟುವಲ್ಲಿ ಕೆಲಸಮಾಡುತ್ತದೆ.
  • ನ್ಯೂಟ್ರಿಯಂಟ್‌ ಒಂದು ಪ್ಲ್ರಾಂಟ್‌ ಇನ್ಸುಲಿನ್‌ ಆಗಿದ್ದು ದೇಹದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ
  • ಹಾಗಕಾಯಿಯಲ್ಲಿ ಕ್ಯಾಲರಿ ಅಂಶ ಕಡಿಮೆ ಪ್ರಮಾಣದಲ್ಲಿದ್ದು, ನಾರಿನಂಶ, ಖನಿಜಾಂಶ, ವಿಟಮಿನ್‌ ಮತ್ತು ಆ್ಯಂಟಿಆಕ್ಸಿಡೆಂಟ್‌ ಅಪಾರ ಪ್ರಮಾಣದಲ್ಲಿ ಲಭ್ಯವಿದೆ.
  • ಹಾಗಲಕಾಯಿ ರಸವನ್ನು ಸೇವಿಸುವುದರಿಂದ ರಕ್ತ ಶುದ್ಧಿಗೊಳ್ಳುತ್ತದೆ.
  • ಇದರಲ್ಲಿರುವ ಕಿಣ್ವಗಳು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವುದರಿಂದ, ಕ್ಯಾನ್ಸರ್‌ ಸೆಲ್‌ಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ.

ಇಷ್ಟೇಲ್ಲಾ ಔಷಧಿಗುಣ ಉಳ್ಳ ಹಾಗಕಾಯಿನ್ನು ತಿನ್ನದೇ ಇದ್ದರೆ ಹೇಗೆ ಅಲ್ವ.!