ಹಲ್ಲು ನೋವು ಎಲ್ಲರಿಗೂ ಬಂದೇ ಬರುತ್ತೆ. ನೋವು ಬಂದಾಗ ಯಾವ ಶತ್ರುಗೂ ಈ ನೋವು ಬರಬಾರದು ಎಂದು ಹೇಳಿರುತ್ತೀರ ಆದ್ರೆ ನೋವು ಬಂದಾಗ ತಕ್ಷಣ ಮನೆಯಲ್ಲಿರುವ ಈ ಪದಾರ್ಥಗಳನ್ನು ಬಳಸಿ ಉಪಶಮನಮಾಡಿಕೊಳ್ಳ ಬಹುದು.!

೧. ಸ್ವಲ್ಪ ಉಪ್ಪು, ಬೆಳ್ಳುಳ್ಳಿಯ ಪೇಸ್ಟ್? ಮಿಶ್ರಣ ಮಾಡಿ ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.
೨. ಅರ್ಧ ಕಪ್ ನೀರು, ಒಂದು ಚಿಟಿಕೆ ಉಪ್ಪು, ಅರ್ಧ ಚಮಚ ಅಡುಗೆ ಸೋಡಾ ಮಿಶ್ರಣ ಮಾಡಿ ಬಾಯಿ ಮುಕ್ಕಳಿಸುವುದು ವಸಡಿನ ಹಾಗೂ ಬಾಯಿಯ ಆರೋಗ್ಯಕ್ಕೆ ಒಳ್ಳೆಯದು.
೩. ಮಂಜುಗಡ್ಡೆ?ಗಳಿಂದ ಮಸಾಜ್ ಮಾಡಿದರೆ ತಾತ್ಕಾಲಿಕವಾಗಿ ಹಲ್ಲುನೋವು ಕಡಿಮೆಯಾಗುತ್ತದೆ.
೪. ಲವಂಗದ ಎಣ್ಣೆಯನ್ನು ನೇರವಾಗಿ ಹಲ್ಲುನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.