ಸೀತಾಫಲ ಹಣ್ಣು ಬಯಲು ಸೀಮೆ, ಶುಶ್ಕ ಪ್ರದೇಶದಲ್ಲಿ ಹಾಗೂ ಗುಡ್ಡಗಳಲ್ಲಿ ತನ್ನಷ್ಟಕ್ಕೆ ತಾನೇ ಬೇಳೆಯುವ ಈ ಹಣ್ಣು. ಅದರಲ್ಲೂ ಚಳಿಗಾಲದಲ್ಲಿಯೇ ಬರುವಂತ ಹಣ್ಣು.

ಈ ಹಣ್ಣುನಲ್ಲಿ ಹಲವಾರು ವಿಟಮಿನ್ ಗಳು ಅಡಕವಾಗಿದೆ.

ಈಹಣ್ಣಿನಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ, ನಿಯಾಸಿನ್, ವಿಟಮಿನ್ ಎ ಸತ್ವಗಳು ಆರೋಗ್ಯಕ್ಕೆ ಬಹಳ ಉಪಯುಕ್ತವಾದವು.

ಈ ಹಣ್ಣನ್ನು ಸೇವಿಸುವುದರಿಂದ ಹೃದಯಾಘಾತದಿಂದ ರಕ್ಷಿಸುತ್ತದೆ, ಅಸ್ತಮಾ ರೋಗ ಬರದಂತೆ ತಡೆಯುತ್ತದೆ, ಮಧುಮೇಹದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ, ಜೀರ್ಣಕ್ರಿಯೆಗೆ ಸಹಕರಿಸುತ್ತದೆ, ಕೊಲೆಸ್ಟ್ರಾಲ್ ಕಡಿಮೆಯಾಗಿಸುತ್ತದೆ, ಹೃದಯದ ಒತ್ತಡ ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ, ರಕ್ತಹೀನತೆಯ ಚಿಕಿತ್ಸೆಗೆ ನೆರವಾಗುತ್ತದೆ.

ಹಿರಿಯರು ಹೇಳುವಂತೆ ಯಾವ ಕಾಲದಲ್ಲಿ ಯಾವ ಹಣ್ಣು ಬರುತ್ತೋ ಅದನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ.

ಹಾಗಾದರೆ ಇನ್ನೇಕ ತಡ ಆಯಾ ಕಾಲದಲ್ಲಿ ಬರುವ ಹಣ್ಣುಗಳನ್ನು ಸೇವಿಸಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಸರಿ ಅಲ್ಲವೆ.?