ನೀವು ಶುಗರ್ ಟೆಸ್ಟ್ ಮಾಡಿಸಲು ಯಾವುದಾದರು ಲ್ಯಾಬ್ ಗೆ ಹೋಗುತ್ತೀರ. ಅಲ್ಲಿ ಸಕ್ಕರೆ ಕಾಯಿಲೆ ಇರುವವರು ಈ ಹಣ್ಣುಗಳನ್ನು ತಿನ್ನುವಂತ್ತಿಲ್ಲ ಎಂದು ಹಣ್ಣುಗಳ ಮಾದರಿಯನ್ನು ಜೋಡಿಸಿರುತ್ತಾರೆ. ಅದನ್ನು ನೋಡಿ ಆ ಹಣ್ಣುಗಳನ್ನು ತಿನ್ನದೆ ಇರುತ್ತೀರ ಅಲ್ವ. ಅವುಗಳಲ್ಲಿ

ಆಧುನಿಕ ಜೀವನ ಶೈಲಿ, ರೋಗಗಳು ಮತ್ತು ಹೃದಯ ವಿಜ್ಞಾನ ಕ್ಷೇತ್ರದ ಪ್ರಗತಿ ವಿಷಯ ಕುರಿತು ವಿಶೇಷ .ಈ ಸಕ್ಕರೆ ಕಾಯಿಲೆ ಬಂತೆಂದರೆ ಸಾಕು ಯಾವುದೇ ಹಣ್ಣುಗಳನ್ನು ಮುಟ್ಟುವುದಕ್ಕೂ ಮನ ಅಂಜುತ್ತದೆ.

ಇದು ತಿಂದರೆ ಶುಗುರ್ ಹೆಚ್ಚಾಗುತ್ತದೆಯೇನೋ ಎಂಬ ಭಯ ಕಾಡುತ್ತದೆ. ಹಾಗಾದ್ರೆ ಸಕ್ಕರೆ ಕಾಯಿಲೆ ಇರುವವರು ಯಾವ ಹಣ್ಣುಗಳನ್ನು ತಿನ್ನಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಸೇಬಿನ ಹಣ್ಣಿನಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಹಾಗಾಗಿ ಮಧುಮೇಹವಿರುವವರು ಈ ಹಣ್ಣನ್ನು ತಿನ್ನಬಹುದು.

ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಪೊಟ್ಯಾಷಿಯಂ ಇರುತ್ತದೆ. ಇದು ಕೂಡ ಮಧುಮೇಹದವರಿಗೆ ಒಳ್ಳೆಯದು. ಪಿಯರ್ಸ್ ಹಣ್ಣಿನಲ್ಲಿ ಸಾಕಷ್ಟು ಆಂಟಿಆಂಕ್ಸಿಡೆಂಟ್ಸ್, ವಿಟಮಿನ್ಸ್, ಮಿನರಲ್ಸ್ ಇರುತ್ತದೆ. ಇದು ಕೂಡ ಶುಗರ್ ಇರುವವರು ಸೇವಿಸಬಹುದು. ದ್ರಾಕ್ಷಿ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ನಾರಿನಾಂಶಗಳು ಇರುತ್ತದೆ. ಈ ಹಣ್ಣುಗಳನ್ನು ರಕ್ತದಲ್ಲಿ ಶುಗರ್ ಲೆವಲ್ ಅನ್ನು ಹೆಚ್ಚಿಸುವುದಿಲ್ಲ. ಅದರಂತೆ ಆಯಾ ಕಾಲದಲ್ಲಿ ಬರುವ ಹಣ್ಣುಗಳನ್ನು ಒಂದು ಎರಡು ತಿಂದರೆ ಅಡ್ಡಿಯಿಲ್ಲ.  ಅತೀಯಾದರೆ ಅಮೃತವೂ ವಿಷವಾಗುತ್ತದೆ. ಆದ್ದರಿಂದ ಹಿತಮಿತವಾಗಿ ಹಣ್ಣು ತಿಂದು ಆರೋಗ್ಯವನ್ನು ಕಾಪಾಡಿಕೊಳ್ಳಿ.!