ಹೇಳಿ ಕೇಳಿ ಮಳೆಗಾಲ ಶೀತ, ನೆಗಡಿ, ಕೆಮ್ಮು, ಜ್ವರ ಬರುವುದು ಸಹಜ ಸಾಮಾನ್ಯ. ಅದರಲ್ಲೂ ಯಾವುದೇ ಔಷಧಿ ತೆಗೆದುಕೊಂಡರು ಕನಿಷ್ಠ ಪಕ್ಷ ಒಂದು ವಾರವಾದರೂ ಬೇಕು ಶಮನವಾಗಲು ಹಾಗಾಗಿ ನಿಮಗೆ ನಗಡಿ, ಕೆಮ್ಮು ಶೀತ ಬಂದರೆ ಮನೆಯಲ್ಲಿರುವ ಮನೆಮದ್ದು ಬಳಸಿ.

ಲಿಂಬುಜೇನುತುಪ್ಪವನ್ನು ಉಗುರು ಬೆಚ್ಚಗಿನ ನೀರಿಗೆ ಹಾಕಿ ಕುಡಿಯುವುದು, ಬಿಸಿ ನೀರಿಗೆ ನಾಲ್ಕೈದು ಹನಿ ನೀಲಗಿರಿ ಎಣ್ಣೆ ಅಥವಾ ತುಳಸಿ ಎಲೆ ಹಾಕಿ ಹಬೆ ತೆಗೆದುಕೊಳ್ಳುವುದು, ತುಳಸಿ ಹಾಗೂ ಪುದಿನ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಅದಕ್ಕೆ ನಿಂಬೆರಸ, ಜೇನುತುಪ್ಪ ಹಾಗೂ ಒಂದು ಇಂಚು ಶುಂಠಿ ಹಾಕಿ ಕಷಾಯ ಮಾಡಿ ಕುಡಿದರೆ ಶೀತ, ನೆಗಡಿ, ಕೆಮ್ಮು, ಜ್ವರ ಕಡಿಮೆಯಾಗುತ್ತವೆ.