ಮಳೆಗಾಲದಲ್ಲಿ  ಕೊರೋನಾ ಭೀತಿ ನಡುವೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಕಷಾಯ ಕುಡಿಯದವರು ಮಸಾಲ ಟೀ ಮಾಡಿಕೊಂಡು ಕುಡಿಯಿರಿ.

¼ ಕಪ್-ಕಾಳುಮೆಣಸಿನ ಕಾಳು, ¼ ಕಪ್-ಒಣಶುಂಠಿ, 20-ಏಲಕ್ಕಿ, 3 ಇಂಚಿನಷ್ಟು-ಚಕ್ಕೆ, 20-ಲವಂಗ, ½ ಟೀ ಸ್ಪೂನ್-ತುರಿದ ಜಾಯಿಕಾಯಿಯನ್ನು ತೊಳೆದು ಒಣಗಿಸಿದ ಮಿಕ್ಸಿ ಜಾರಿ ಹಾಕಿ ಪುಡಿ ಮಾಡಿ ಜರಡಿ ಹಿಡಿದುಕೊಂಡು ಸಂಗ್ರಹಿಸಿಕೊಳ್ಳಿ. ಟೀ ಮಾಡುವಾಗ ಟೀ ಪುಡಿ ಜತೆ ಇದನ್ನು ½ ಟೀ ಸ್ಪೂನ್ ಹಾಕಿ ಕುದಿಸಿ ಹಾಲು, ಸಕ್ಕರೆ ಸೇರಿಸಿದರೆ ರುಚಿಕರವಾದ ಮಸಾಲ ಟೀ ರೆಡಿಯಾಗುತ್ತೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.!